ಬೆಂಗಳೂರು : ಬೆಂಗಳೂರಿನ ಹಲವು ರಸ್ತೆಗಳಲ್ಲಿ ಇಂದು ಸಂಚಾರ ನಿರ್ಬಂಧಿಸಲಾಗಿದೆ ಎಂದು ಸಂಚಾರಿ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.
ಸದಾಶಿವನಗರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಅರಮನೆ ಮೈದಾನದ ಕೃಷ್ಣವಿಹಾರ ಗೇಟ್ ನಂ-01, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ದಿನಾಂಕ 19.11.2025 ರಂದು ಬೆಳಿಗ್ಗೆ 07:00 ಗಂಟೆಯಿಂದ ಸಂಜೆ 04:00 ಗಂಟೆಯವರೆಗೆ ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು, ಸದರಿ ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯಮಂತ್ರಿಗಳು, ಕೇಂದ್ರ ಸರ್ಕಾರದ/ರಾಜ್ಯ ಸರ್ಕಾರದ ಕ್ಯಾಬಿನೆಟ್ ದರ್ಜೆ ಸಚಿವರು, ಇತರೆ ಗಣ್ಯವ್ಯಕ್ತಿಗಳು, ಶಾಲಾ ಕಾಲೇಜು ವಿಧ್ಯಾರ್ಥಿಗಳು ಸೇರಿದಂತೆ, ಸುಮಾರು 80,000 ಸಾರ್ವಜನಿಕರು ಹಾಗೂ ಸುಮಾರು 2305 ವಾಹನಗಳು ಬರುವ ನಿರೀಕ್ಷೆ ಇರುತ್ತದೆ.
ಕಾರ್ಯಕ್ರಮ ನಡೆಯುವ ಸ್ಥಳವಾದ ಆರಮನೆ ಮೈದಾನದ ಕೃಷ್ಣವಿಹಾರ ಗೇಟ್ ಹಾಗೂ ಬಳ್ಳಾರಿ ರಸ್ತೆ, ಸಿ ವಿ ರಾಮನ್ ರಸ್ತೆ, ಜಯಮಹಲ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಂಭವವಿರುವುದರಿಂದ ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ದಿನಾಂಕ:19.11.20025 ರಂದು ಬಳ್ಳಾರಿ ರಸ್ತೆಯಲ್ಲಿ ಈ ಕೆಳಕಂಡ ಸಂಚಾರ ಮಾರ್ಪಾಡುಗಳನ್ನು ಮಾಡಲಾಗಿದೆ.
- ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಹೋಗುವ ಸಾರ್ವಜನಿಕರು/ವಾಹನ ಚಾಲಕರು ಓಲ್ಡ್ ಹೈಗೌಂಡ ಜಂಕ್ಷನ್ -ಕಲ್ಪನಾ ಜಂಕ್ಷನ್ – ಓಲ್ಡ್ ಉದಯ ಟಿವಿ ಜಂಕ್ಷನ್- ಕಂಟೋನ್ಸೆಂಟ್ ರೈಲ್ವೇ ಸ್ಟೇಷನ್ ಟ್ಯಾನರಿ ರಸ್ತೆ- ನಾಗಾವರ ಮೂಲಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಹೋಗುವುದು.
- ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಯಿಂದ ನಗರದ ಕೇಂದ್ರ ಭಾಗದ ಕಡೆಗೆ ಹೋಗುವ ಸಾರ್ವಜನಿಕರು/ವಾಹನ ಚಾಲಕರು ಹೆಬ್ಬಾಳದಲ್ಲಿ ಬಲತಿರುವು ಪಡೆದು ನಾಗಾವರ ಜಂಕ್ಷನ್ ನಲ್ಲಿ ಬಲತಿರುವು ಪಡೆದು ಬಂಬು ಬಜಾರ್ ಕ್ಲೀನ್ಸ್ ರೋಡ ಮುಖಾಂತರ సిటి ಕಡೆಗೆ ಹೋಗುವುದು./ಹೆಬ್ಬಾಳ ರಿಂಗ್ ರಸ್ತೆ-ಕುವೆಂಪು ಸರ್ಕಲ್ -ಗೊರಗುಂಟೆ ಪಾಳ್ಯ ಜಂಕ್ಷನ ನಲ್ಲಿ ಬಲ ತಿರುವು ಪಡೆದು ನಗರದ ಕಡೆ ಹೋಗಬಹುದು.
- ಯಶವಂತಪುರ ಕಡೆಯಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಹೋಗುವವರು ಮತ್ತಿಕೆರೆ ರಸ್ತೆ ಮೂಲಕ ಬಿ ಇ ಎಲ್ ವೃತ್ತದಲ್ಲಿ ಬಲತಿರುವು ಪಡೆದು ರಿಂಗ್ ರೋಡ್ ಮೂಲಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪುವುದು.
- ಯಶವಂತಪುರ ಕಡೆಯಿಂದ ಸಿಟಿ ಕಡೆಗೆ ಹೋಗುವವರು ಡಾ. ರಾಜ್ ಕುಮಾರ್ ರಸ್ತೆ ಮೂಲಕ ಸಿಟಿ ಕಡೆಗೆ ಹೋಗುವುದು.
🚨 Traffic Alert 🚨
— DCP TRAFFIC WEST (@DCPTrWestBCP) November 18, 2025
Large gathering at Palace Grounds Tomorrow (9AM to 4PM). Heavy congestion is expected around the venue.
🚫 Avoid Bellary Road From Chalukya Circle to Mekhri Circle
🚫 Avoid Jayamahal Road
✅ Plan ahead & take alternative routes#Bengaluru pic.twitter.com/CtHiFQcf4W
“ಸಂಚಾರಸಲಹೆ/'Traffic Advisory' pic.twitter.com/OKlvZaxi1Q
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) November 17, 2025
