ಆನೇಕಲ್: ಕುಡಿದ ಮತ್ತಿನಲ್ಲಿ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ನಲ್ಲಿ ನಡೆದಿದೆ.
ಆನೇಕಲ್ ತಾಲೂಕಿನ ಬಳ್ಳೂರಿನಲ್ಲಿ ಈ ಘಟನೆ ನಡೆದಿದೆ. ತಮಿಳುನಾಡು ಮೂಲದ ಬಲರಾಮನ್ (28) ಕೊಲೆಯಾದ ಯುವಕ. ಟ್ಯಾಂಕ್ ಕ್ಲೀನಿಂಗ್ ಕೆಲ ಮಾಡುತ್ತಿದ್ದ. ಸಾಯಿ ಗಾರ್ಡನ್ ಬಾರ್ ಗೆ ಬಂದಿದ್ದ ಬಲರಾಮ್ ಹಾಗೂ ಕೆಲವರ ನಡುವೆ ಗಲಾಟೆಯಾಗಿತ್ತು.
ಕುಡಿದ ಮತ್ತಿನಲ್ಲಿ ಗಲಾಟೆ ಮಾಡುತ್ತಿದ್ದವರನ್ನು ಬಾರ್ ಸಿಬ್ಬಂದಿ ಹೊರಗೆ ಕಳುಹಿಸಿದ್ದರು. ಬಾರ್ ನಿಂದ ಹೊರ ಬಂದ ದುಷ್ಕರ್ಮಿಗಳು ಬಲರಾಮ್ ನನ್ನು ಹತ್ಯೆಗೈದು ಪರಾರಿಯಾಗಿದ್ದಾರೆ. ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
