SHOCKING : ಬೆಂಗಳೂರಲ್ಲಿ ‘ದೃಶ್ಯ’ ಸಿನಿಮಾ ಶೈಲಿಯಲ್ಲಿ ಮರ್ಡರ್ : ಟೆಕ್ಕಿಯನ್ನು ಕೊಂದು ಮನೆಯೊಳಗೆ ಹೂಳಿದ ಪಾಪಿಗಳು.!

ಬೆಂಗಳೂರು : ದೃಶ್ಯ ಸಿನಿಮಾ ಶೈಲಿಯಲ್ಲಿ ಟೆಕ್ಕಿಯೋರ್ವನನ್ನ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಆತನನ್ನು ಕೊಂದು ಆರೋಪಿಗಳು ಮೃತದೇಹವನ್ನು ಮನೆಯಲ್ಲಿ ನೆಲದ ಅಡಿ ಹೂತು ಹಾಕಿದ್ದರು. ಅನೇಕಲ್ ತಾಲೂಕಿನ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೊಲೆ ನಡೆದಿದೆ.

ಕೊಲೆಯಾದ ಟೆಕ್ಕಿಯನ್ನು ಆಂಧ್ರಪ್ರದೇಶ ಕುಪ್ಪಂ ಮೂಲದ ಶ್ರೀನಾಥ್ (30) ಎಂದು ಗುರುತಿಸಲಾಗಿದೆ.
ಶ್ರೀನಾಥ್ ಅತ್ತಿಬೆಲೆಯ ನೆರಳೂರಿನಲ್ಲಿ ತನ್ನ ಪತ್ನಿ ಹಾಗೂ ಮಗು ಜೊತೆ ವಾಸವಿದ್ದರು. ಹಣ ಡಬಲ್ ಮಾಡಿಕೊಡುತ್ತೇನೆ ಎಂದು ದುಷ್ಕರ್ಮಿ ಪ್ರಭಾಕರ್ ಶ್ರೀನಾಥ್ ಗೆ ಹೇಳಿದ್ದಾನೆ. ಅಂತೆಯೇ ಶ್ರೀನಾಥ್ ಪ್ರಭಾಕರ್ ಗೆ 4 ಲಕ್ಷ ಹಣ ಕೊಟ್ಟಿದ್ದಾನೆ. ಬಳಿಕ ಹಣ ವಾಪಸ್ ಕೊಡುವಂತೆ ಶ್ರೀನಾಥ್ ಕೇಳಿದ್ದಾನೆ. ಹಣ ಕೊಡುತ್ತೇನೆ ಬಾ ಅಂತ ಹೇಳಿ ಆಂಧ್ರದ ಕುಪ್ಪಂಗೆ ಶ್ರೀನಾಥ್ ನನ್ನು ಕರೆಸಿಕೊಂಡ ಪ್ರಭಾಕರ್ ಕೃತ್ಯ ಎಸಗಿದ್ದಾನೆ. ತಲೆಗೆ ಸುತ್ತಿಗೆಯಿಂದ ಹೊಡೆದು ಕೊಂದು ಮನೆಯಲ್ಲಿ ಗುಂಡಿ ತೋಡಿ ಮೃತದೇಹವನ್ನ ಮನೆಯಲ್ಲಿ ಹೂತು ಹಾಕಿದ್ದಾರೆ. ಕುಪ್ಪಂಗೆ ಹೋಗಿ ಬರುವುದಾಗಿ ಪತ್ನಿಗೆ ಹೇಳಿ ಹೋಗಿದ್ದ ಪತಿ ವಾಪಸ್ ಬಂದಿರಲಿಲ್ಲ. ಭಯಗೊಂಡ ಪತ್ನಿ ಪ್ರಭಾಕರ್ ಗೆ ಕೇಳಿದಾಗ ಆತ ಬಂದಿಲ್ಲ ಎಂದು ನಾಟಕ ಮಾಡಿದ್ದಾನೆ. ಪತಿ ನಾಪತ್ತೆ ಹಿನ್ನೆಲೆ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪತ್ನಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಭಾಕರ್ ಹಾಗೂ ಜಗದೀಶ್ ನನ್ನ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಿಗೆ ಬಂದಿದೆ.

ಈ ಹಿಂದೆ ಪ್ರತ್ಯೇಕ ಕೊಲೆ ಪ್ರಕರಣದಲ್ಲಿ ಜೈಲುಸೇರಿದ್ದ ಪ್ರಭಾಕರ್ ಹಾಗೂ ಜಗದೀಶ್ ಜೈಲಿನಲ್ಲೇ ಸ್ನೇಹಿತರಾಗಿದ್ದರು. ಜೈಲಿನಿಂದ ಹೊರ ಬಂದ ಪ್ರಭಾಕರ್ ಹಾಗೂ ಜಗದೀಶ್ ಈ ಕೃತ್ಯ ಎಸಗಿದ್ದಾರೆ. ಕೊಲೆಯಾದ ಶ್ರೀನಾಥ್ ಪ್ರಭಾಕರ್ ಗೆ ಸೋದರ ಸಂಬಂಧಿಯಾಗಿದ್ದನು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read