ಮೈಸೂರು: ಸಮಸ್ಯೆ ಹೇಳಲು ಬಂದ ವ್ಯಕ್ತಿಯ ಮೇಲೆಯೇ ಕಾಂಗ್ರೆಸ್ ಶಾಸಕ ಹಲ್ಲೆ ನಡೆಸಿರುವ ಘಟನೆ ಮೈಸೂರಿನ ಕೆ.ಆರ್.ನಗರದಲ್ಲಿ ನಡೆದಿದೆ.
ಕೆ.ಆರ್.ನಗರ ತಾಲೂಕಿನ ಗ್ರಾಮದ ಕುಂದುಕೊರತೆ ಸಭೆಯಲ್ಲಿ ಕಾಂಗ್ರೆಸ್ ಶಾಸಕ ರವಿಶಂಕರ್ ಹಲ್ಲೆ ನಡೆಸಿರುವ ವಿಡಿಯೋ ವರಲ್ ಆಗಿದೆ. ಶಾಸಕರ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಚುನಾವಣೆ ಸಂದರ್ಭದಲ್ಲಿ ಕೈಕಾಲು ಕಟ್ಟಿ ಮತ ಕೇಳುತ್ತಾರೆ. ಈಗ ಸಮಸ್ಯೆ ಹೇಳಿದರೆ ಹೊಡೆಯುತ್ತಾರೆ ಎಂದು ಗ್ರಾಮಸ್ಥರು, ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕ ರವಿಶಂಕರ್ ನಡೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ.
