ತುಮಕೂರು: ಗೋಧಿ ತುಂಬಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆಯೇ ಪಲ್ಟಿಯಾಗಿ ಬಿದ್ದಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನಲ್ಲಿ ನಡೆದಿದೆ.
ಇಲ್ಲಿನ ಹುಯಿಲುದೊರೆ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ವೇಗವಾಗಿ ಬಂದ ಲಾರಿ ಎದುರಿನಿಂದ ಬರುತ್ತಿದ್ದ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ರಸ್ತೆಯ ತುಂಬೆಲ್ಲ ಗೋಧಿ ಚೀಲಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಸಂಪೂರ್ಣ ಗೋಧಿ ರಸ್ತೆಪಾಲಾಗಿದೆ.
ರಸ್ತೆ ತುಂಬ ಗೋಧಿ ಚೆಲ್ಲುತ್ತಿದ್ದಂತೆ ಗ್ರಾಮಸ್ಥರು ಗೋಧಿ ತುಂಬಿಕೊಳ್ಳಲು ಮುಗಿಬಿದ್ದಿದ್ದಾರೆ. ರಸ್ತೆಯಲ್ಲಿ ಚೆಲ್ಲಿರುವ ಗೋಧಿ, ಗೋಧಿ ಚೀಲಗಳನ್ನು ಎತ್ತಿಕೊಂಡು ಮನೆಗಳಿಗೆ ಸಾಗಿದ್ದಾರೆ.
