ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಬೀದಿ ಕಾಮಣ್ಣರ ಅಟ್ಟಹಾಸ ಹೆಚ್ಚುತ್ತಿದೆ. ಯುವತಿಯೊಬ್ಬಳು ತನ್ನ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗಿದ್ದಾಗ ಯುವಕನೊಬ್ಬ ನಾಯಿ ಮುದ್ದು ಮಾಡುವ ನೆಪದಲ್ಲಿ ಯುವತಿಗೆ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ಉಪಕಾರ್ ಲೇಔಟ್ ನಲ್ಲಿ ರಾತ್ರಿ ಯುವತಿ ತನ್ನ ನಾಯಿಯನ್ನು ವಾಕಿಂಗ್ ಗೆ ಕರೆದೊಯ್ದಿದ್ದಳು. ಈ ವೇಳೆ ಬೈಕ್ ನಲ್ಲಿ ಬಂದ ಯುವಕ ನಿಮ ನಾಯಿ ತುಂಬಾ ಕ್ಯೂಟ್ ಆಗಿದೆ. ಒಂದು ಸಲ ಮುದ್ದು ಮಾಡಬಹುದು ಎಂದು ಕೇಲಿದ್ದಾನೆ. ಯುವತಿ ಆಯಿತು ಎಂದು ನಾಯಿಯನ್ನು ಆತನಿಗೆ ಕೊಡುತ್ತಿದ್ದ ಯುವಕ ನಾಯಿ ಮುದ್ದು ಮಾಡುವ ನೆಪದಲ್ಲಿ ಯುವತಿಯ ಮೈ-ಕೈ ಮುಟ್ಟಿ, ಬ್ಯಾಡ್ ಟಚ್ ಮಾಡಿ ಎಸ್ಕೇಪ್ ಆಗಿದ್ದಾನೆ.
ಕಂಗಾಲಾದ ಯುವತಿ ಜ್ಞಾನಭಾರತಿ ಠಾಣೆಯಲ್ಲಿ ದೂರು ನೀಡಿದ್ದಾಳೆ. ಆರೋಪಿ ಯುವಕನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
