ಮಡಿಕೇರಿ: ಪತ್ನಿಗೆ ವಿಡಿಯೋ ಕಾಲ್ ಮಾಡಿ ಲೈವ್ ನಲ್ಲಿದ್ದಾಗಲೇ ಪತಿ ಮಹಾಶಯ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಸಿಂಕೋನ ಪ್ರದೇಶದಲ್ಲಿ ನಡೆದಿದೆ.
ಸೋಮವಾರಪೇಟೆ ತಾಲೂಕಿನ ಕಿಬ್ಬೆಟ್ಟ ನಿವಾಸಿ ಕೀರ್ತನ್ (36) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದ ಕೀರ್ತನ್ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಪತಿ ಜೈಲು ಸೇರಿದ ಬಳಿಕ ಪತ್ನಿ ಜ್ಯೋತಿ ತವರಿಗೆ ತೆರಳಿದ್ದಳು. ಜೈಲಿನಿಂದ ವಾಪಾಸ್ ಆದ ಕೀರ್ತನ್ ಪತ್ನಿಯನ್ನು ಕರೆತಲು ಹೋಗಿದ್ದಾನೆ. ಆದರೆ ಪತ್ನಿ ವಾಪಾಸ್ ಆಗಲು ಒಪ್ಪಿಲ್ಲ.
ಕಳ್ಳತನದಲ್ಲಿ ತಾನು ಜೈಲು ಸೇರಿದ್ದಕ್ಕೆ ಪತ್ನಿ ಮನೆಗೆ ವಾಪಾಸ್ ಬರಲು ನಿರಾಕರಿಸಿದ್ದಕ್ಕೆ ನೊಂದ ಕೀರ್ತನ್ ಪತ್ನಿಗೆ ವಿಡಿಯೋ ಕಾಲ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಹಿಂದೆಯೂ ಕೀರ್ತನ್ ಹಲವು ಬಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸುತ್ತಿದ್ದನಂತೆ. ಮಡಿಕೇರಿ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
