ಪಡಿತರ ಚೀಟಿದಾರರೇ ಗಮನಿಸಿ: ವಿತರಿಸಲಾದ ಆಹಾರ ಧಾನ್ಯ ಸಂಗ್ರಹಣೆ, ಮಾರಾಟ ಮಾಡಿದ್ರೆ ಮುಕ್ತ ಮಾರುಕಟ್ಟೆ ದರದಷ್ಟು ದಂಡ

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ನವೆಂಬರ್-2025 ರ ಮಾಹೆಗೆ ಹಾಸನ ಜಿಲ್ಲೆಯ ಪ್ರತಿ ಅಂತ್ಯೋದಯ(ಎ.ಎ.ವೈ) ಪಡಿತರ ಚೀಟಿಗೆ 21 ಕೆ.ಜಿ ರಾಗಿಯನ್ನು ಹಾಗೂ 14 ಕೆ.ಜಿ ಸಾರವರ್ಧಿತ ಅಕ್ಕಿ ಹಾಗೂ ಪಿ.ಹೆಚ್.ಹೆಚ್.(ಬಿ.ಪಿ.ಎಲ್) ಪಡಿತರ ಚೀಟಿಯಲ್ಲಿನ ಪ್ರತಿ ಫಲಾನುಭವಿಗೆ 3 ಕೆ.ಜಿ ರಾಗಿಯನ್ನು ಹಾಗೂ 2 ಕೆ.ಜಿ ಸಾರವರ್ಧಿತ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ.

ಇದರ ಜೊತೆಗೆ ಏಕ ಸದಸ್ಯ, ದ್ವಿಸದಸ್ಯ ಮತ್ತು ತ್ರಿಸದಸ್ಯ ಎಎವೈ ಪಡಿತರ ಚೀಟಿಗಳನ್ನು ಹೊರತುಪಡಿಸಿ ನಾಲ್ಕು ಮತ್ತು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಎಎವೈ ಪಡಿತರ ಚೀಟಿಯ ಪ್ರತಿ ಫಲಾನುಭವಿಗೆ (ಕೇಂದ್ರ ಎನ್‌ಎಫ್‌ಎಸ್‌ಎ ಹಂಚಿಕೆಯ 35 ಕೆಜಿಯನ್ನು ಹೊರತುಪಡಿಸಿ) ಮತ್ತು ಪಿಹೆಚ್‌ಹೆಚ್ ಪಡಿತರ ಚೀಟಿಯ ಫ್ರತಿ ಫಲಾನುಭವಿಗೆ ನವೆಂಬರ್-2025 ರ ಮಾಹೆಗೆ ಅನ್ನಭಾಗ್ಯ ಯೋಜನೆಯಡಿ ನೇರ ನಗದು ವರ್ಗಾವಣೆ ಬದಲಾಗಿ ಹೆಚ್ಚುವರಿ 5 ಕೆಜಿ ಅನ್ನಭಾಗ್ಯ ಅಕ್ಕಿಯನ್ನು ಕೆಳಕಂಡ ಪ್ರಮಾಣದಲ್ಲಿ ಹಂಚಿಕೆ ನೀಡಲಾಗುತ್ತದೆ.

ನವೆಂಬರ್-2025 ರ ಮಾಹೆಗೆ ರಾಜ್ಯ ವ್ಯಾಪ್ತಿಯ ಪ್ರತಿ ಪಿ.ಎಚ್.ಎಚ್ ಫಲಾನುಭವಿಗೆ ತಲಾ 5 ಕೆ ಜಿ ಅಕ್ಕಿಯಂತೆ ಹಂಚಿಕೆ ಪ್ರಮಾಣವನ್ನು ನಿಗದಿಪಡಿಸಿ ಹಂಚಿಕೆ ನೀಡಿದೆ. ಪ್ರಸ್ತುತ ನವೆಂಬರ್-2025 ರ ಮಾಹೆಗೆ ಆದ್ಯತೇತರ ಪಡಿತರ ಚೀಟಿ(ಎ.ಪಿ.ಎಲ್) ಗೆ ಯಾವುದೇ ಆಹಾರಧಾನ್ಯ ಹಂಚಿಕೆಯಾಗಿರುವುದಿಲ್ಲವೆAದು ಪಡಿತರ ಚೀಟಿದಾರರಿಗೆ ಈ ಮೂಲಕ ತಿಳಿಯಪಡಿಸಿದೆ.

ಹಾಸನ ಜಿಲ್ಲೆಯ ಆಲೂರು, ಬೇಲೂರು, ಅರಕಲಗೂಡು ಮತ್ತು ಸಕಲೇಶಪುರ ತಾಲ್ಲೂಕಿನ ಸೀಮೆಎಣ್ಣೆ ಪಡೆಯಲು ಒಪ್ಪಿಗೆ ನೀಡಿರುವ ಗ್ರಾಮಾಂತರ ಪ್ರದೇಶದ ಎಎವೈ ಮತ್ತು ಪಿಹೆಚ್‌ಹೆಚ್ ಪಡಿತರ ಚೀಟಿದಾರರಿಗೆ ಪ್ರತಿ ಕಾರ್ಡಿಗೆ ಎರಡು ಲೀಟರ್ ನಂತೆ ಪ್ರತಿ ಲೀಟರ್‌ಗೆ ರೂ.35 ರಂತೆ ಹಂಚಿಕೆಯನ್ನು ಬಿಡುಗಡೆ ಮಾಡಲಾಗಿದೆ.

ಒಂದು ರಾಷ್ಟ್ರ ಒಂದು ಪಡಿತರ ಚೀಟಿ (ಅಂತರ್ ರಾಜ್ಯ/ ಅಂತರ್ ಜಿಲ್ಲೆ) ಪೋರ್ಟೆಬಿಲಿಟಿ ಜಾರಿಯಲ್ಲಿರುವುದರಿಂದ ಯಾವುದೇ ರಾಜ್ಯದ ಪಡಿತರ ಚೀಟಿದಾರರು ಯಾವುದೇ ವರ್ಗದ ಪಡಿತರ ಚೀಟಿದಾರರು ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಯಾವುದೇ ನ್ಯಾಯಬೆಲೆ ಅಂಗಡಿದಾರರು ಕಡಿಮೆ ಪ್ರಮಾಣದ ಪಡಿತರವನ್ನು ವಿತರಣೆ ಮಾಡಿದ್ದಲ್ಲಿ, ಹಣ ಕೇಳಿದ್ದಲ್ಲಿ ಮತ್ತು ಇತರೆ ದೂರುಗಳಿಗೆ ನಿಶುಲ್ಕ ದೂರವಾಣಿ ಸಂಖ್ಯೆ 1967 ಹಾಗೂ 1800-425-9339 ಮತ್ತು 14445 ಕ್ಕೆ ಹಾಗೂ ಆಯಾ ತಾಲ್ಲೂಕಿನಲ್ಲಿರುವ ತಹಶೀಲ್ದಾರರ ಕಚÉÃರಿಗೆ ಅಥವಾ ಜಿಲ್ಲೆಯ ಜಂಟಿ ನಿದೇರ್ಶಕರ ಕಚೇರಿಗೆ ದೂರನ್ನು ಸಲ್ಲಿಸಬಹುದಾಗಿದೆ.

ಸದರಿ ಯೋಜನೆಯಡಿ ವಿತರಿಸಲಾದ ಆಹಾರ ಧಾನ್ಯಗಳನ್ನು ಹಣಕ್ಕಾಗಿ ಪಡಿತರ ಚೀಟಿದಾರರು ಮಾರಾಟ ಮಾಡುವುದಾಗಲಿ ಅಥವಾ ಸಂಗ್ರಹಣೆ ಮಾಡುವುದು ಕಂಡುಬಂದಲ್ಲಿ ಅಂತಹ ಪಡಿತರ ಚೀಟಿದಾರರಿಗೆ ವಿತರಿಸಲಾದ ಆಹಾರ ಧಾನ್ಯಗಳಿಗೆ ಮುಕ್ತ ಮಾರುಕಟ್ಟೆ ದರಕ್ಕೆ ದಂಡ ವಿಧಿಸಲಾಗುವುದು ಮತ್ತು ಸದರಿ ಪಡಿತರ ಚೀಟಿಯನ್ನು ಆರು ತಿಂಗಳ ಅವಧಿಗೆ ಅಮಾನತ್ತುಗೊಳಿಸಲಾವುದೆಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read