ಬೆಳಗಾವಿ: ಬೆಳಗಾವಿ ಜಿಲ್ಲೆಯ ಕಿತ್ತೂರು ಕಿರು ಮೃಗಾಲಯದಲ್ಲಿ 28ಕೃಷ್ಣ ಮೃಗಗಳು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ತನಿಖೆಗೆ ಸೂಚಿಸಿದ್ದಾರೆ.
ಭೂತರಾಯನಹಟ್ಟಿ ಬಳಿಯ ಕಿತ್ತೂರು ಚನ್ನಮ್ಮ ಕಿರು ಮೃಗಾಯಲದಲ್ಲಿ ಎರಡು ದಿನಗಳ ಹಿಂದೆ 8 ಕೃಷ್ಣಮೃಗಗಳು ಸಾವನ್ನಿದ್ದವು. ಇಂದು ಒಂದೇ ದಿನ ೨೦ ಕೃಷ್ಣ ಮೃಗಗಳು ನಿಗೂದ್ಢವಾಗಿ ಸಾವನ್ನಪ್ಪಿದ್ದು, ಆತಂಕಕ್ಕೆ ಕಾರಣವಾಗಿದೆ.
ಮೃಗಾಲಯಕ್ಕೆ ಭೇಟಿ ನೀಡಿರುವ ಡಿಎಫ್ ಒ ಎನ್.ಇ.ಕ್ರಾಂತಿ, ಬ್ಯಾಕ್ಟಿರಿಯಲ್ ಇನ್ ಫೆಕ್ಷನ್ ನಿಂದ ಕೃಷ್ಣ ಮೃಗಗಳು ಸಾವನ್ನಪ್ಪಿರುವ ಶಂಕೆ ಇದೆ. ಬೆಂಗಳೂರಿನ ಬನ್ನೇರುಘಟ್ಟ ಪರು ವಿಜ್ಞಾನ ಸಂಸ್ಥೆಯ ತಜ್ಞ ವೈದ್ಯರು ಆಗಮಿಸುತ್ತಿದ್ದು, ಅವರು ಪರೀಕ್ಷೆ ನಡೆಸಲಿದ್ದಾರೆ. 28 ಜಿಂಕೆಗಳ ಸಾವು ಆಘಾತಕಾರಿ ಘಟನೆ ಎಂದು ತಿಳಿಸಿದ್ದಾರೆ.
ಈ ನಡುವೆ ಕೃಷ್ಣ ಮೃಗಗಳ ನಿಗೂಢ ಸಾವು ಪ್ರಕರಣವನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ತನಿಖೆಗೆ ಆದೇಶಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಜಿಂಕೆಗಳು ಸಾಂಕ್ರಾಮಿಕ ಕಾಯಿಲೆಯಿಂದ ಮೃತಪಟ್ಟಿವೆ ಎಂದು ಹೇಳಲಾಗುತ್ತಿದೆ. ಮೃಗಾಲಯದ ಬೇರೆ ಯಾವ ಪ್ರಾಣಿಗಳಿಗೂ ಸೋಂಕು ಹರಡದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಕಲುಷಿತ ನೀರು, ಆಹಾರ ಸೇವಿಸಿ ಸಾವು ಸಂಭವಿಸಿದೆಯೇ ಅಥವಾ ಬೆಕ್ಕು ಇತ್ಯಾದಿ ಸಾಕು ಪ್ರಾಣಿಗಳಿಂದ ಕಾಯಿಲೆ ಹರಡಿ ಸಾವನ್ನಪ್ಪಿದೆಯೇ? ಎಂಬ ಬಗ್ಗೆ ತಜ್ಞರ ಸಮಿತಿ ರಚಿಸಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ.
