ಬೆಂಗಳೂರು : ಬೆಂಗಳೂರಿಗರೇ ಎಚ್ಚರ.! ಬೆಂಗಳೂರಿನಲ್ಲಿ ನೀರು ಪೋಲು ಮಾಡುವವರಿಗೆ 5000 ದಂಡ ವಿಧಿಸುವ ಜಲಮಂಡಳಿ ನೀರಿನ ಕನೆಕ್ಷನ್ ಕೂಡ ಕಟ್ ಮಾಡಲಿದೆ.
ಹೌದು. ಈಗಾಗಲೇ ಕಸ್ ಹಾಕುವವರ ವಿರುದ್ಧ ಸಮರ ಜಿಬಿಎ ಸಮರ ಸಾರುತ್ತಿದೆ. ಇದೀಗ ನೀರು ಪೋಲು ಮಾಡುವವರ ವಿರುದ್ಧ ಕೂಡ BWSSB ಕಣ್ಣಿಟ್ಟಿದೆ. 5000 ರೂ.ದಂಡದ ಜೊತೆ ನೀರಿನ ಕನೆಕ್ಷನ್ ಕೂಡ ಕಟ್ ಮಾಡಲಿದೆ.
ಬೆಂಗಳೂರಲ್ಲಿ ಕುಡಿಯುವ ನೀರನ್ನು ಬೇರೆ ಉದ್ದೇಶಕ್ಕೆ ಬಳಸಿದವರಿಗೆ ಮತ್ತು ಪೋಲು ಮಾಡಿದವರಿಗೆ ಜಲಮಂಡಳಿ 5000 ರೂ.ದಂಡ ಹಾಕುತ್ತಿದೆ. ಈ ಆದೇಶವನ್ನ ಫೆಬ್ರವರಿ 20025 ರಲ್ಲೇ ಹೊರಡಿಸಿತ್ತು. ಆದರೂ ಕೂಡ ಜನ ನೀರು ಪೋಲು ಮಾಡುವುದನ್ನು ಬಿಡುತ್ತಿಲ್ಲ. ಆದ್ದರಿಂದ ಕಾರ್ಯಾಚರಣೆ ಹೆಚ್ಚಿಸಲು ನಿರ್ಧರಿಸಿದ ಮಂಡಳಿ ವಾರಕ್ಕೊಮ್ಮೆ ಸರ್ಪ್ಸೈಸ್ ವಿಸಿಟ್ ಮಾಡಿ ನೀರು ಪೋಲು ಮಾಡುತ್ತಿದ್ದರೆ ದಂಡ ವಿಧಿಸಲಿದೆ. ಹಾಗೂ ನೀರಿನ ಕನೆಕ್ಷನ್ ಕೂಡ ಕಟ್ ಮಾಡುವುದಾಗಿ ಎಚ್ಚರಿಕೆ ನೀಡಿದೆ.
ದಂಡದ ಎಚ್ಚರಿಕೆ ಆದೇಶ ( 17:02:2025)
ಬೆಂಗಳೂರು ಮಹಾನಗರದಲ್ಲಿ ಖಾಯಂ ವಾಸಿಗಳು ಹಾಗೂ ಬಂದು ಹೋಗುವವರನ್ನು ಸೇರಿಸಿ ಸುಮಾರು 1 ಕೋಟಿ 40 ಲಕ್ಷ ಜನಸಂಖ್ಯೆಯನ್ನು ಗುರುತಿಸಲಾಗಿದೆ. ಎಲ್ಲರಿಗೂ ಕುಡಿಯುವ ನೀರನ್ನು ಪೂರೈಕೆ ಮಾಡುವುದು ಅವಶ್ಯವಾಗಿರುತ್ತದೆ. ಪ್ರಸ್ತುತ ನಗರದಲ್ಲಿ ಪ್ರತಿದಿನ ಉಷ್ಣಾಂಶ ಏರುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆಯಿಂದ ಅಂತರ್ಜಲ ಕುಸಿದಿದ್ದು, ಬೆಂಗಳೂರು ನಗರದಲ್ಲಿ ನೀರನ್ನು ಪೋಲು ಮಾಡುವುದನ್ನು ತಡೆಗಟ್ಟಲು ಅವಶ್ಯವೆಂದು ಮನಗಂಡು ಕುಡಿಯುವ ನೀರನ್ನು ಸಾರ್ವಜನಿಕರು ಮಿತವಾಗಿ ಬಳಸುವಂತೆ ಅಗತ್ಯಪಡಿಸಲಾಗಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಈ ಕೆಳಕಂಡಂತೆ ಆದೇಶಿಸಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964ರ ಕಲಂ 33 ಮತ್ತು 34 ರ ಅನುಸಾರ ಬೆಂಗಳೂರು ನಗರದಲ್ಲಿ ಕುಡಿಯುವ ನೀರನ್ನು ಈ ಕೆಳಕಂಡ ಉದ್ದೇಶಗಳಿಗೆ ಬಳಸಲು ಈ ಮೂಲಕ ನೀಷೇದಿಸಲಾಗಿದೆ.
- ವಾಹನಗಳ ಸ್ವಚ್ಚತೆಗೆ
- ಕೈದೋಟಕ್ಕೆ
- ಕಟ್ಟಡ ನಿರ್ಮಾಣಕ್ಕೆ
- ಮನೋರಂಜಕವಾಗಿ ಕಾರಂಜಿಯಂತಹ ಆಕರ್ಷಕ ವ್ಯವಸ್ಥೆಗೆ
- ಸಿನಿಮಾ ಮಂದಿರ ಮತ್ತು ಮಾಲುಗಳಲ್ಲಿನ ಕುಡಿಯುವ ನೀರಿನ ಹೊರತು ಇನ್ನಿತರೆ ಬಳಕೆಗೆ
- ರಸ್ತೆ ನಿರ್ಮಾಣ ಮತ್ತು ಸ್ವಚ್ಚತೆಗೆ
ಮೇಲ್ಕಂಡ ನಿಷೇದ ಆದೇಶವನ್ನು ಉಲ್ಲಂಘನೆ ಮಾಡಿದಲ್ಲಿ, ಉಲ್ಲಂಘನೆ ಮಾಡುವವರ ವಿರುದ್ದ ಜಲಮಂಡಳಿಯ ಕಾಯ್ದೆ 1964 ರ ಕಲಂ 109 ರಂತೆ ರೂ. 5000/- ಗಳ ದಂಡ ವಿಧಿಸಲಾಗುವುದು. ಈ ಉಲ್ಲಂಘನೆಯು ಮರುಕಳಿಸಿದಲ್ಲಿ ದಂಡ ಮೊತ್ತ ರೂ.5000/- ಜೊತೆಗೆ ಹೆಚ್ಚುವರಿಯಾಗಿ ರೂ.500/-ಪ್ರತಿದಿನದಂತೆ ದಂಡ ಹಾಕಲಾಗುವುದು.ಸಾರ್ವಜನಿಕರು ಮೇಲ್ಕಂಡ ನಿಷೇಧಗಳನ್ನು ಯಾರಾದರು ಉಲ್ಲಂಘನೆ ಮಾಡುವ ದು ಕಂಡುಬಂದಲ್ಲಿ ಕೂಡಲೇ ಮಂಡಳಿಯ ಕಾಲ್ ಸೆಂಟರ್ ಸಂಖ್ಯೆ : 1916 ಗೆ ತಿಳಿಸಬಹುದಾಗಿದೆ ಎಂದು ಆದೇಶ ಹೊರಡಿಸಿದೆ.

