BIG NEWS : ರಾಜ್ಯದಲ್ಲಿ 3,69,934 ಪುರುಷ, 4,00,481 ಮಹಿಳೆಯರಲ್ಲಿ ‘ಮಧುಮೇಹ ದೃಢ’ : ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು : ಆರೋಗ್ಯ ಇಲಾಖೆಯು ಏಪ್ರಿಲ್ 1, 2025ರಿಂದ ‘ಗೃಹ ಆರೋಗ್ಯ’ ಕಾರ್ಯಕ್ರಮದಡಿ ರಾಜ್ಯದ 20,44,204 ಮನೆಗಳಲ್ಲಿ 64 ಲಕ್ಷ ಜನರಿಗೆ ಉಚಿತ ಮಧುಮೇಹ ತಪಾಸಣೆ ನಡೆಸಿದೆ. ಆರು ತಿಂಗಳಲ್ಲೇ, 32,99,798 ಪುರುಷರು ಮತ್ತು 33,92,486 ಮಹಿಳೆಯರಲ್ಲಿ ಸಕ್ಕರೆ ಕಾಯಿಲೆ ತಪಾಸಣೆ ನಡೆಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.

ಹೊಸದಾಗಿ 3,69,934 ಪುರುಷರಲ್ಲಿ ಮತ್ತು 4,00,481 ಮಹಿಳೆಯರಲ್ಲಿ ಮಧುಮೇಹ ದೃಢಪಟ್ಟಿದೆ.
ರಾಜ್ಯದಲ್ಲಿ ಈ ಹಿಂದೆ 9,59,769 ಪುರುಷರಲ್ಲಿ ಮತ್ತು 10,32,584 ಮಹಿಳೆಯರಲ್ಲಿ ಮಧುಮೇಹ ಕಂಡುಬಂದಿತ್ತು.

ಹೀಗೆ ರಾಜ್ಯಾದ್ಯಂತ ಮಧುಮೇಹಿ ರೋಗಿಗಳನ್ನು ಗುರುತಿಸಿ ಉಚಿತ ತಪಾಸಣಾ ಶಿಬಿರ, ಜಾಗೃತಿ ಕಾರ್ಯಕ್ರಮ, ತಜ್ಞರಿಂದ ಸಲಹೆ ಹಾಗೂ ಉಚಿತ ಚಿಕಿತ್ಸೆ, ಔಷಧಗಳನ್ನು ನೀಡಲಾಗುತ್ತಿದೆ.ಸಕ್ಕರೆ ಕಾಯಿಲೆ ಬಗ್ಗೆ ಭಯಬೇಡ ಹಾಗೆಯೇ ನಿರ್ಲಕ್ಷ್ಯವೂ ಬೇಡ. ಸರಿಯಾದ ಆಹಾರ ಕ್ರಮ, ಶಿಸ್ತುಬದ್ಧ ಜೀವನ ಶೈಲಿಯಿಂದ ಆರಂಭದಲ್ಲೇ ಮಧುಮೇಹವನ್ನು ತಡೆಯಬಹುದು. ತಡ ಮಾಡಬೇಡಿ, ಹತ್ತಿರದ ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯರ ಸಲಹೆ ಪಡೆದು ನೆಮ್ಮದಿಯ ಜೀವನ ನಡೆಸಿ ಎಂದು ಸಲಹೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read