ಚಿಕ್ಕಬಳ್ಳಾಪುರ : ಅಮೆರಿಕದ ವಾಯುಸೇನೆಯ ಬಾಂಬರ್ ಪ್ಲೇನ್ ಹಾರಾಟ ಕಂಡು ಚಿಕ್ಕಬಳ್ಳಾಪುರದ ಜನತೆ ಬೆಚ್ಚಿ ಬಿದ್ದಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಆರೂರು, ಆವಲನಾಗೇನಹಳ್ಳಿ, ಚಿಕ್ಕಪೈಲಗುರ್ಕಿ ಸೇರಿದಂತೆ ಹಲವಾರು ಗ್ರಾಮಗಳ ಮೇಲೆ ಅಮೆರಿಕದ ಲ್ಯಾನ್ಸರ್ ಬಾಂಬರ್ ಸೂಪರ್ ಸಾನಿಕ್ ಯುದ್ಧ ವಿಮಾನ ಹಾರಾಟ ನಡೆಸಿತು. ಇದರ ಶಬ್ದ ಕಂಡ ಜನ ಬೆಚ್ಚಿ ಬಿದ್ದಿದ್ದಾರೆ.
ವಿಮಾನದ ಬಿ ಲ್ಯಾನ್ಸರ್ ಭಾರಿ ಶಬ್ದಕ್ಕೆ ಜನರು ಬೆಚ್ಚಿ ಬಿದ್ದಿದ್ದು, ಎಲ್ಲೋ ಹೆಲಿಕಾಪ್ಟರ್ ಪತನವಾಗಿದೆ ಎಂಬ ಸುದ್ದಿ ಭಾರಿ ಹಬ್ಬಿತು. ಕೂಡಲೇ ಪೆರೇಸಂದ್ರ ಪೊಲೀಸ್ ಠಾಣೆಗೆ ಕೂಡ ಜನರು ಸುದ್ದಿ ಮುಟ್ಟಿಸಿದ್ದಾರೆ. ಕೊನೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್ ನಿಂದ ಜಿಲ್ಲಾ ಪೊಲೀಸ್ ಇಲಾಖೆಗೆ ಇದು ಬಿ1ಬಿ ಬಾಂಬರ್ನ ಸದ್ದು, ಈಗಾಗಲೇ ಬಿ1ಬಿ ಬಾಂಬರ್ ವಿಮಾನ ಏರ್ ಪೋರ್ಟ್ನಲ್ಲಿ ಸೇಫ್ ಆಗಿ ಲ್ಯಾಂಡ್ ಆಗಿದೆ ಅಂತ ತಿಳಿಸಿದ್ದಾರೆ.
ಭಾರತ-ಅಮೆರಿಕ ಜಂಟಿ ಸಮರಾಭ್ಯಾಸದ ಭಾಗವಾಗಿ ಅಮೆರಿಕದ ಬಿ-1ಬಿ ಲ್ಯಾನ್ಸರ್ ಬಾಂಬರ್ ವಿಮಾನ ಭಾರತಕ್ಕೆ ಆಗಮಿಸಿದೆ ಎಂದು ತಿಳಿದುಬಂದಿದೆ. ನ. 10 ರಿಂದ 13ರ ವೆರೆಗೆ ಭಾರತ ಹಾಗೂ ಯುಎಸ್ಎ ಸಮರಾಭ್ಯಾಸ ನಡೆಯುತ್ತಿದೆ.
