BIG NEWS: ಮತ್ತೊಂದು ಉಗ್ರರ ಜಾಲ ಪತ್ತೆ: ಪಂಜಾಬ್ ನಲ್ಲಿ 10 ಐಎಸ್ಐ ಏಜೆಂಟರು ಅರೆಸ್ಟ್: ಗ್ರೆನೆಡ್ ದಾಳಿ ಸಂಚು ವಿಫಲ

ಚಂಡೀಗಢ: ದೆಹಲಿಯ ಕೆಂಪುಕೋಟೆ ಬಳಿ ಕಾರ್ ಬಾಂಬ್ ಸ್ಫೋಟ ನಡೆಸಿದ್ದ ಉಗ್ರರ ಬಗ್ಗೆ ತನಿಖೆ ಚುರುಕುಗೊಂಡಿರುವಾಗಲೇ ಪಂಜಾಬ್ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದಾರೆ. ಪಾಕಿಸ್ತಾನ ಬೆಂಬಲಿತ ಉಗ್ರರ ಜಾಲವನ್ನು ಪಂಜಾಬ್ ನ ಲುಧಿಯಾನಾದಲ್ಲಿ ಬಂಧಿಸಿದ್ದಾರೆ.

10 ಜನ ಐಎಸ್ ಐ ಏಜೆಂಟ್ ರನ್ನು ಪೊಲೀಸರು ಬಂಧಿಸಿದ್ದಾರೆ. ಇವರೆಲ್ಲರೂ ಐಎಸ್ಐ ನ ಗ್ರೆನೇಡ್ ದಾಳಿ ಮಾಡ್ಯೂಲ್ ಗಳು. ಲುಧಿಯಾನ ಕಮಿಷನರೇಟ್ ಪೊಲೀಸರು ಹತ್ತು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ.

ಆರೋಪಿಗಳು ಮಲೇಷ್ಯಾ ಮೂಲದ ಮೂವರ ಮೂಲಕ ಪಾಕಿಸ್ತಾನದ ಹ್ಯಾಂಡ್ಲರ್ ಗಳನ್ನು ಸಂಪರ್ಕಿಸಿದ್ದರು. ಹ್ಯಾಂಡ್ ಗ್ರಾನೆಡ್ ಗಳನ್ನು ಪಡೆದು ಬೇರೆಡೆ ತಲುಪಿಸುತ್ತಿದ್ದರು. ಪಂಜಾಬ್ ನ ಜನನಿಬಿಡ ಪ್ರದೇಶಗಳಲ್ಲಿ ಗ್ರೆನೆಡ್ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ಡಿಜಿಪಿ ಗೌರವ್ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read