ಬೆಂಗಳೂರು : ಸಫಾರಿ ವೇಳೆ ಮಹಿಳೆ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ನಲ್ಲಿ ನಡೆದಿದೆ.
ವಾಹನದ ಮೇಲೆ ಎಗರಿ ಚಿರತೆ ದಾಳಿ ನಡೆಸಿದ್ದು. ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನ ಜಿಗಣಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 50 ವರ್ಷದ ವಹಿತ ಬಾನು ಮೇಲೆ ಈ ದಾಳಿ ನಡೆದಿದೆ.
ಚೆನ್ನೈ ಮೂಲಕ ವಹಿತ ಬಾನು ತನ್ನ ಪತಿ ಹಾಗೂ ಮಗನ ಜೊತೆ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಗೆ ಬಂದಿದ್ದರು. ಸಫಾರಿ ವೇಳೆ ಮಹಿಳೆ ವಾಹನದ ಗ್ಲಾಸ್ ಓಪನ್ ಮಾಡಿ ಚಿರತೆ ನೋಡುತ್ತಿದ್ದಾಗ ಮಹಿಳೆ ಮೇಲೆ ಏಕಾಏಕಿ ಚಿರತೆ ದಾಳಿ ನಡೆಸಿದೆ. ಮಹಿಳೆಯನ್ನ ಜಿಗಣಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗಿದೆ.
