ಚಾಮರಾಜನಗರ: ಹುಲಿ’ ಬಂತು ಎಂದು AI ಫೋಟೋ, ವಿಡಿಯೋ ಹರಿಬಿಟ್ಟರೆ ಕಾನೂನು ಕ್ರಮ ಫಿಕ್ಸ್ . ಹೌದು, ಈ ಬಗ್ಗೆ ‘ಅರಣ್ಯ ಇಲಾಖೆ’ ಎಚ್ಚರಿಕೆ ಸಂದೇಶ ನೀಡಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಹುಲಿ ದಾಳಿ ಭೀತಿ ನಡುವೆಯೇ ಎಐ ತಂತಜ್ಞಾನ ಆಧಾರಿತ ಹುಲಿ ವಿಡಿಯೋಗಳು ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ. ಹುಲಿ ಪ್ರತ್ಯಕ್ಷ ಎಂದು ಎಐ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗಿದ್ದು, ಇಂತಹ ಕಿಡಿಗೇಡಿಗಳ ವಿರುದ್ಧ ಅರಣ್ಯ ಇಲಾಖೆ ಖಡಕ್ ವಾರ್ನಿಂಗ್ ನೀಡಿದೆ.
ಶೇರ್ ಮಾಡಿರುವ ಬಹುತೇಕ ವಿಡಿಯೋಗಳು ಎಐ ವಿಡಿಯೋಗಳಾಗಿದ್ದು, ಇಂತಹ ಎಐ ಹುಲಿ ವಿಡಿಯೋ ನಿರ್ಮಿಸಿ ಜನರಲ್ಲಿ ಆತಂಕ ಸೃಷ್ಟಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಹುಲಿ ಬಂತು ಎಂದು ಸುಳ್ಳು ಫೋಟೋ, ವಿಡಿಯೋ ಹಂಚುವುದರಿಂದ ಜನರಲ್ಲಿ ಅನಗತ್ಯ ಭಯವುಂಟಾಗುತ್ತದೆ. ಅಲ್ಲದೇ ಅರಣ್ಯ ಇಲಾಖೆ ಕಾರ್ಯನಿರ್ವಹಣೆಗೂ ಸಮಸ್ಯೆಯಾಗುತ್ತದೆ. ಇಂತಹ ಕಿಡಿಗೇದಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
