ಬೆಂಗಳೂರು: ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳಿಗೆ ಇಟ್ಟಿದ್ದ ಸಿಡಿಮದ್ದು ಸ್ಫೋಟಗೊಂಡು ಕುರಿಗಾಹಿಮಹಿಳೆಯ ಕೈ ಬೆರಳು ಛಿದ್ರ ಛಿದ್ರವಾಗಿರುವ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಗಮ್ಮನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಿಡಿಮದ್ದು ಸ್ಫೋಟಗೊಂಡು ಕುರಿಗಾಹಿ ಮಹಿಳೆ ರಂಗಮ್ಮ (50) ಎಂಬುವವರು ಗಂಭೀರವಾಗಿ ಗಾಯಗೊಂಡಿದಾರೆ.
ಕಾಡುಹಂದಿ, ಇತರೆ ಪ್ರಾಣಿಗಳು ಹೊಲಕ್ಕೆ ಬಾರದಂತೆ ಸಿಡಿಮದ್ದು ಇಡಲಾಗಿತ್ತು. ಮೇಕೆಗೆ ಸಿಡಿಮದ್ದಿನ ವೈರ್ ಸುತ್ತಿಕೊಂಡಿತ್ತು. ವೈರ್ ತೆಗೆದು ಮೇಕೆ ರಕ್ಷಿಸಲು ಹೋಗಿ ರಂಗಮ್ಮ ಗಾಯಗೊಂಡಿದ್ದಾರೆ.
