ಗಂಗಾ ಘಾಟ್’ಗೆ  ‘ಪ್ರಧಾನಿ ಮೋದಿ’ ಸಹೋದರಿ ವಸಂತಿಬೆನ್ ಭೇಟಿ : ಸರಳತೆಗೆ ನೆಟ್ಟಿಗರು ಫಿದಾ |WATCH VIDEO


ನವದೆಹಲಿ : ಗಂಗಾ ಘಾಟ್’ಗೆ ಪ್ರಧಾನಿ ಮೋದಿ ಸಹೋದರಿ ವಸಂತಿಬೆನ್ ಭೇಟಿ ನೀಡಿದ್ದು, ಅವರ ಸರಳತೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ತಂಗಿ ವಸಂತಿಬೆನ್ ಹಸ್ಮುಖ್ಲಾಲ್ ಮೋದಿ ಗಂಗಾ ಘಾಟ್ನಲ್ಲಿ ಕುಳಿತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅವರ ಸರಳತೆ ಮತ್ತು ನಮ್ರತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಅಪೂರ್ವ ಸಿಂಗ್ ಎಂಬ ಎಕ್ಸ್ ಬಳಕೆದಾರರು ಹಂಚಿಕೊಂಡಿರುವ ಈ ವಿಡಿಯೋದಲ್ಲಿ, “ಇವರು ಸಾಮಾನ್ಯ ಮಹಿಳೆಯಲ್ಲ, ಭಾರತದ ಅತ್ಯಂತ ಜನಪ್ರಿಯ ನಾಯಕ, ಪ್ರಧಾನಿ ನರೇಂದ್ರ ಮೋದಿ ಮೋದಿ ಅವರ ಸಹೋದರಿ. ಸಾಮಾನ್ಯ ವ್ಯಕ್ತಿಯಂತೆ, ಅವರು ಗಂಗಾ ಘಾಟ್ನಲ್ಲಿ ಸ್ನಾನ ಮಾಡಲು ಬಂದಿದ್ದರು ಎಂದು ಟ್ವೀಟ್ ಮಾಡಿದ್ದಾರೆ.
ವರದಿಗಳ ಪ್ರಕಾರ, ವಸಂತಿಬೆನ್ ಮತ್ತು ಅವರ ಪತಿ ಹಸ್ಮುಖ್ಲಾಲ್ ಮೋದಿ ಆರು ದಿನಗಳ ಧಾರ್ಮಿಕ ಪ್ರವಾಸಕ್ಕಾಗಿ ಋಷಿಕೇಶ ತಲುಪಿದ್ದಾರೆ. ಅವರು ಆಗಮಿಸಿದಾಗ, ದಂಪತಿಗಳನ್ನು ಹೋಟೆಲ್ ಉದ್ಯಮಿ ಅಕ್ಷತ್ ಗೋಯಲ್ ಮತ್ತು ನಮಾಮಿ ನರ್ಮದಾ ಸಂಘದ ರಾಷ್ಟ್ರೀಯ ಅಧ್ಯಕ್ಷ ಪಂಡಿತ್ ಹರೀಶ್ ಉನಿಯಾಲ್ ಅವರು ಪ್ರೀತಿಯಿಂದ ಬರಮಾಡಿಕೊಂಡರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read