ದೇಶದ ಅಭಿವೃದ್ಧಿಗೆ ಬೆಂಗಳೂರು ಕೇಂದ್ರಾಡಳಿತ ಪ್ರದೇಶವಾಗುವುದು ಅತ್ಯಗತ್ಯ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಹೇಳಿರುವುದಾಗಿ ಸುಳ್ಳು ಸುದ್ದಿ ಪ್ರಕಟವಾಗಿದೆ.
ಬೆಂಗಳೂರಿನ ಅಭಿವೃದ್ಧಿಗೆ ಅದು ಕೇಂದ್ರಾಡಳಿತ ಪ್ರದೇಶವಾಗಬೇಕೆಂದು ಸಿ.ಟಿ. ರವಿ ಹೇಳಿದ್ದಾರೆ ಎನ್ನುವಂತೆ ಯಾರೋ ಕಿಡಿಗೇಡಿಗಳು ನಕಲಿ ಸುದ್ದಿಯನ್ನು ಪ್ರಜಾವಾಣಿ ವರದಿ ಎನ್ನುವಂತೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇಂತಹ ಸುಳ್ಳು ಸುದ್ದಿಯನ್ನು ನಂಬಬೇಡಿ ಎಂದು ಸಿ.ಟಿ. ರವಿ ಸ್ಪಷ್ಟಪಡಿಸಿದ್ದಾರೆ.
ಇಂತಹ ಹೇಳಿಕೆಯನ್ನು ನಾನು ಎಂದಿಗೂ ನೀಡಿಲ್ಲ. ಇದು ಫೇಕ್ ಚಿತ್ರ ಎಂದು ಪ್ರಜಾವಾಣಿ ಕೂಡ ಸ್ಪಷ್ಟಪಡಿಸಿದೆ. ಇದಕ್ಕಾಗಿ ಇಂತಹ ಸುಳ್ಳು ಸುದ್ದಿಗಳನ್ನು ನಂಬಬೇಡಿ, ಅವುಗಳನ್ನು ಹಂಚಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ. ಇಂತಹ ಎಡಿಟ್ ಮಾಡಿದ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ಅಭಿವೃದ್ಧಿಗೆ ಅದು ಕೇಂದ್ರಾಡಳಿತ ಪ್ರದೇಶವಾಗಬೇಕೆಂದು ನಾನು ಹೇಳಿದ್ದೇನೆ ಎಂಬಂತೆ ಯಾರೋ ಕಿಡಿಗೇಡಿಗಳು ನಕಲಿ ಸುದ್ದಿಯನ್ನು 'ಪ್ರಜಾವಾಣಿ' ವರದಿ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
— Ravi C T 🇮🇳 ರವಿ ಸಿ ಟಿ (@CTRavi_BJP) November 10, 2025
ಇಂತಹ ಹೇಳಿಕೆಯನ್ನು ನಾನು ಎಂದಿಗೂ ನೀಡಿಲ್ಲ. ಇದು ಫೇಕ್ ಚಿತ್ರ ಎಂದು ಪ್ರಜಾವಾಣಿಯೂ ಸ್ಪಷ್ಟಪಡಿಸಿದೆ. ಇದಕ್ಕಾಗಿ ಪತ್ರಿಕೆಗೆ… pic.twitter.com/8I9MfCv4xG
