ಬೆಂಗಳೂರು: ವಿಧಾನಸೌಧದಲ್ಲಿಯೇ ಟೆರರಿಸ್ಟ್ ಗಳಿದ್ದಾರೆ. ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಟೆರರಿಸ್ಟ್ ಗಳಿಗಿಂತಲೂ ಡೇಂಜರ್ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರರು, ಅಪರಾಧಿಗಳಿಗೆ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ, ವಿಧಾನಸೌಧದಲ್ಲಿಯೇ ಟೆರರಿಸ್ಟ್ ಗಳಿದ್ದಾರೆ. ಆ ಟೆರರಿಸ್ಟ್ ಗಳು ಯಾರೆಂದು ನಮಗಿಂತ ಚನ್ನಾಗಿ ನಿಮಗೆ ಗೊತ್ತು. ಜನರಿಗೆ ಕೂಡಾ ಗೊತ್ತು. ನಾವು ಜೈಲಿನಲ್ಲಿರುವ ಟೆರರಿಸ್ಟ್ ಗಳ ಬಗ್ಗೆ ಮಾತನಾಡುತ್ತಿದ್ದೇವೆ. ಅಧಿಕಾರಿಗಳ ನಡುವೆಯೇ ರಾಜಕಾರಣ ನಡೆಯುತ್ತಿದೆ ಎಂದರು.
ಗೃಹ ಸಚಿವರು ತನಿಖೆ ಮಾಡುತ್ತೇವೆ ಎಂದು ಹೇಳುತ್ತಾರೆ. ಏನು ತನಿಖೆ ಮಾಡುತ್ತೀರಾ? ತನಿಖೆ ಮಾಡಿ ಏನು ಮಾಡುತ್ತೀರಾ? ವಿಧಾನಸೌಧದಲ್ಲಿರುವ ಟೆರರಿಸ್ಟ್ ಗಳು ಜೈಲಿನಲ್ಲಿರುವ ಟೆರರಿಸ್ಟ್ ಗಳಿಗಿಂತಲೂ ಅಪಾಯಕಾರಿ ಎಂದು ಹೇಳಿದರು.
