ಮಧ್ಯಪ್ರದೇಶದಲ್ಲಿ ಪಕ್ಷದ ಕಾರ್ಯಕರ್ತರ ತರಬೇತಿ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಅವರಿಗೆ 10 ಪುಷ್-ಅಪ್ ಗಳ ಶಿಕ್ಷೆ ಸಿಕ್ಕಿತು.
ಕಾಂಗ್ರೆಸ್ ಮೂಲಗಳ ಪ್ರಕಾರ, ಮಧ್ಯಪ್ರದೇಶದ ಪಚ್ಮರಿಯಲ್ಲಿ ನಡೆದ ಕಾರ್ಯಕರ್ತರ ತರಬೇತಿ ಕಾರ್ಯಕ್ರಮದಲ್ಲಿ ಈ ಪುಶ್-ಅಪ್ ಪ್ರಸಂಗ ನಡೆದಿದೆ. ಕಾಂಗ್ರೆಸ್ ತನ್ನ ಸಂಘಟನಾ ಶ್ರೇಣಿಯನ್ನು ಪುನರುಜ್ಜೀವನಗೊಳಿಸುವ ವ್ಯಾಯಾಮವಾದ ‘ಸಂಘಥಾನ್ ಸೃಜನ್ ಅಭಿಯಾನ’ವನ್ನು ನಡೆಸಿತು.
ಕಾರ್ಯಕ್ರಮ ಆಯೋಜಿಸಿದ್ದ ಪಕ್ಷದ ನಾಯಕರು , ನಿಯಮ ಮೀರಿದವರಿಗೆ ನಾವು ಶಿಕ್ಷೆ ನೀಡುವ ಕಾನೂನು ರೂಪಿಸಿದ್ದೇವೆ ಎಂದು ರಾಹುಲ್ ಗಾಂಧಿಗೆ ಹೇಳಿದರು.ಆಗ ಶಿಕ್ಷೆ ಏನೆಂದು ಕೇಳಿದ ರಾಹುಲ್ ಗಾಂಧಿಗೆ 10 ಪುಷಪ್ ಮಾಡಬೇಕು ಎಂದು ಮುಖ್ಯಸ್ಥರು ತಿಳಿಸಿದರು. ನಂತರ ತಡ ಮಾಡದೇ ರಾಹುಲ್ ಗಾಂಧ ಪುಷಪ್ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದರು.
