ಲಖ್ನೋ: ಪ್ರಕರಣವೊಂದರ ಆರೋಪಿಗಳ ಪಟ್ಟಿಯಿಂದ ಹೆಸರನ್ನು ಕೈ ಬಿಡಲು ಉತ್ತರ ಪ್ರದೇಶ ಪೊಲೀಸರು ಲಂಚವಾಗಿ ನಾಲ್ಕು ಜತೆ ಶೂಗಳನ್ನು ಪಡೆದುಕೊಂಡಿದ್ದಾರೆ.
ಆಗ್ರಾ ನಗರದಲ್ಲಿ ಪೊಲೀಸರು ವ್ಯಾಪಾರಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ. ಅದರ ಭಾಗವಾಗಿ ವ್ಯಾಪಾರಿಯ ಹೇಳಿಕೆ ದಾಖಲಿಸಿ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಬೇಕಿತ್ತು. ವ್ಯಾಪಾರಿಯನ್ನು ಸಂಪರ್ಕಿಸಿದ್ದ ಪೊಲೀಸರು ಅವರ ಪರವಾಗಿ ವರದಿ ಬರೆಯಲು ಲಂಚವಾಗಿ ಹಣ ಕೇಳಿದ್ದಾರೆ. ಆದರೆ ವ್ಯಾಪಾರಿ ಹಣ ನೀಡಲು ಆಗುವುದಿಲ್ಲ ಎಂದಾಗ ನಾಲ್ಕು ಜೋಡಿ ಶೂಗಳನ್ನು ಪಡೆದುಕೊಂಡಿದ್ದಾರೆ. ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಸಂಖ್ಯೆಗೆ ದೂರು ನೀಡಿದ ಬಳಿಕ ತನಿಖೆ ನಡೆಸಿ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.
