ಕರ್ನಾಟಕ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ದಿ ನಿಗಮದಿಂದ 2025-26ನೇ ಸಾಲಿಗೆ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು ಅರ್ಹ ಕ್ರಿಶ್ಚಿಯನ್ ಸಮುದಾಯದಿಂದ ಆನ್-ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ವಿವಿಧ ಯೋಜನೆಗಳು:
ಶ್ರಮಶಕ್ತಿ ಸಾಲದ ಯೋಜನೆ: ಈ ಯೋಜನೆಯಡಿ ರೂ.50 ಸಾವಿರಗಳೊಳಗೆ ಶೇ.4 ರಷ್ಟು ಬಡ್ಡಿ ದರದಲ್ಲಿ ಶೇ.50 ಸಾಲ ಹಾಗೂ ಶೇ.50 ಸಹಾಯಧನ ನೀಡಲಾಗುವುದು.
ಸ್ವಾವಲಂಬಿ ಸಾರಥಿ ಯೋಜನೆ: ಈ ಯೋಜನೆಯಡಿ ಟ್ಯಾಕ್ಸಿ, ಗೂಡ್ಸ್ ವಾಹನ, ಪ್ಯಾಸೆಂಜರ್ ಆಟೋರಿಕ್ಷಾ ಖರೀದಿಸಲು ಫಲಾನುಭವಿಗಳಿಗೆ ಬ್ಯಾಂಕ್, ಫೈನಾನ್ಸ್, ಸೊಸೈಟಿಯಿಂದ ಸಾಲ ಮಂಜೂರಾತಿಯಾಗಿದ್ದಲ್ಲಿ ನಿಗಮದಿಂದ ವಾಹನದ ಮೌಲ್ಯದ ಶೇ.50 ರಷ್ಟು ಸಹಾಯಧನ, ಗರಿಷ್ಠ ರೂ.03 ಲಕ್ಷ ನೀಡಲಾಗುವುದು.
ವಿದೇಶ ವ್ಯಾಸಂಗಕ್ಕೆ ಸಾಲ ಯೋಜನೆ: ಅಲ್ಪಸಂಖ್ಯಾತರ ವರ್ಗದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ವ್ಯಾಸಂಗ ಮಾಡಲು ಮಾನ್ಯತೆ ಪಡೆದಿರುವ ಯಾವುದೇ ವಿದೇಶ ವಿಶ್ವವಿದ್ಯಾಲಯದಿಂದ ಪದವಿ, ಸ್ನಾತಕೋತ್ತರ ಪದವಿ, ವಿಧ್ಯಾಭ್ಯಾಸ ಪಡೆಯಲು ರೂ.20 ಲಕ್ಷಗಳವರೆಗೆ ಸಾಲವನ್ನು ನಿಗಮಕ್ಕೆ ಆಸ್ತಿಯ (ಕಟ್ಟಡ/ಜಮೀನು) ಅಡಮಾನದ ಮೇಲೆ ಮಾತ್ರ ಒದಗಿಸಲಾಗುವುದು.
ವೃತ್ತಿ ಪ್ರೋತ್ಸಾಹ ಯೋಜನೆ: ಅಲ್ಪಸಂಖ್ಯಾತರ ಸಮುದಾಯದ ಜನರಿಗೆ, ಹಣ್ಣು, ಹಂಪಲು, ಕೋಳಿ ಮತ್ತು ಮೀನು ಮಾರಾಟ, ಏಳನೀರು, ಕಬ್ಬಿನ ಹಾಲು, ತಂಪು ಪಾನೀಯ ಮಾರಾಟ, ಬೇಕರಿ, ಲ್ಯಾಂಡರಿ, ಡ್ರೆöÊ-ಕ್ಲೀನಿಂಗ್, ಆಟಿಕೆ ಗೊಂಬೆ ತಯಾರಿಕೆ ಇತ್ಯಾದಿ ಚಟುವಟಿಕೆಗಳನ್ನು ಪ್ರಾರಂಭಿಸಲು ಅಥವಾ ಅಭಿವೃದ್ಧಿ ಪಡಿಸಲು ನಿಗಮದಿಂದ ಶೇ.50ರಷ್ಟು ಸಹಾಯಧನದೊಂದಿಗೆ ರೂ.1 ಲಕ್ಷ ಸಾಲ ನೀಡಲಾಗುವುದು.
ಅಲ್ಪಸಂಖ್ಯಾತರ ಸಮುದಾಯದ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಸಹಾಯಧನ ಯೋಜನೆ: ಅಲ್ಪಸಂಖ್ಯಾತರ ಸಮುದಾಯದ ಸ್ವ-ಸಹಾಯ ಗುಂಪುಗಳಿಗೆ ವಿವಿಧ ರೀತಿಯ ಸ್ವಯಂ ಉದ್ಯೋಗ ಚಟುವಟಿಕೆಯಲ್ಲಿ ತೊಡಗಿಸಿ ಅವರನ್ನು ಆರ್ಥಿಕ ಸ್ವಾವಲಂಭಿಯನ್ನಾಗಿ ಮಾಡುವ ಸಲುವಾಗಿ ರಾಷ್ಟ್ರೀಕೃತ ಶೆಡ್ಯೂಲ್ ಬ್ಯಾಂಕ್, ಆರ್ಬಿಐ ನಿಂದ ಮಾನ್ಯತೆ ಪಡೆದ ವಿವಿಧ ಆರ್ಥಿಕ ಸಂಸ್ಥೆಗಳಿAದ ಪಡೆಯುವ ಸಾಲಕ್ಕೆ ಘಟಕ ವೆಚ್ಚದ ಶೇ.50 ಅಥವಾ ಗರಿಷ್ಠ ರೂ.2 ಲಕ್ಷ ಸಹಾಯಧನವನ್ನು ನಿಗಮದಿಂದ ಒದಗಿಸಲಾಗುವುದು. ಸಹಾಯಧನವು ಬ್ಯಾಕ್ ಎಂಡ್ ಸಬ್ಸಿಡಿಯಾಗಿದ್ದು,
ಸ್ವ-ಸಹಾಯ ಸಂಘಗಳ ಆರ್ಥಿಕ ಬ್ಯಾಂಕ್ ಗಳಿಂದ ಪಡೆದ ಸಾಲದ ಮರುಪಾವತಿಗೆ ಹೊಂದಾಣಿಕೆ ಮಾಡಲಾಗುವುದು.
ಅರಿವು ಯೋಜನೆ: ಈ ಯೋಜನೆಯಡಿ ವೃತ್ತಿಪರ ಕೋರ್ಸ್ ಮಾಡಬಯಸುವ ಅಲ್ಪಸಂಖ್ಯಾತ ವಿಧ್ಯಾರ್ಥಿಗಳಿಗೆ ವ್ಯಾಸಂಗ ಪೂರ್ಣಗೊಳಿಸುವವರೆಗೆ ಪ್ರತಿ ವರ್ಷ ರೂ.50 ಸಾವಿರದಿಂದ ರೂ.5 ಲಕ್ಷದವರೆಗೆ ಸಾಲ ವ್ಯಾಸಂಗ ಪೂರ್ಣಗೊಳಿಸಿದ 6 ತಿಂಗಳ ನಂತರ ಶೇ.2ರ ಸೇವಾ ಶುಲ್ಕದೊಂದಿಗೆ ಸಾಲ ಮರುಪಾವತಿ ಮಾಡಲು ಅವಕಾಶ.
ವ್ಯಾಪಾರ/ಉದ್ದಿಮೆ ನೇರಸಾಲ ಯೋಜನೆ: ಅಲ್ಪಸಂಖ್ಯಾತ ವರ್ಗದ ಜನರಿಗೆ ವ್ಯಾಪಾರ, ಉದ್ದಿಮೆ ಪ್ರಾರಂಭಿಸಲು ಅಥವಾ ಅಭಿವೃದ್ಧಿಪಡಿಸಿಕೊಳ್ಳುವ ಸಲುವಾಗಿ ಸಾಲ ನೀಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದ್ದು, ಈ ಯೋಜನೆಯಡಿ ವ್ಯಾಪಾರ, ಆರ್ಥಿಕ, ಸೇವಾಕ್ಷೇತ್ರ, ಕೃಷಿ ಆಧಾರಿತ ಚಟುವಟಿಕೆ ಕೈಗೊಳ್ಳಲು ರೂ.5 ಲಕ್ಷದಿಂದ ರೂ.20 ಲಕ್ಷಗಳವರೆಗೆ ಸಾಲ ಸೌಲಭ್ಯ ನೀಡಲಾಗುವುದು.
ಗಂಗಾಕಲ್ಯಾಣ ಯೋಜನೆ: ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ಕೊಳವೆಬಾವಿ ಕೊರೆಯಲು, ಪಂಪು ಅಳವಡಿಕೆ ಹಾಗೂ ನೀರಾವರಿ ವಿದುದ್ಧೀಕರಣಕ್ಕೆ ಸಂಪೂರ್ಣ ಸಹಾಯಧನ ಒದಗಿಸಲಾಗುವುದು.
ಶ್ರಮಶಕ್ತಿ (ವಿಶೇಷ ಮಹಿಳಾ) ಯೋಜನೆ: ಈ ಯೋಜನೆಯಡಿ ಸಮುದಾಯದ ವಿಧವೆ, ವಿಚ್ಛೇದಿತೆ, ಅವಿವಾಹಿತ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲು ರೂ.50 ಸಾವಿರಗಳೊಳಗೆ ಶೇ.4 ರ ಬಡ್ಡಿ ದರದಲ್ಲಿ ಶೇ.50 ಸಾಲ ಹಾಗೂ ಶೇ.50 ಸಹಾಯಧನ ನೀಡಲಾಗುವುದು.
ತರಬೇತಿ ಯೋಜನೆ: ಸಮುದಾಯದ ನಿರುದ್ಯೋಗಿ ಯುವಕ-ಯುವತಿಯರಿಗೆ ಸ್ವ-ಉದ್ಯೋಗ/ಕಚೇರಿ, ಕಂಪನಿ, ಉದ್ದಿಮೆಗಳಲ್ಲಿ ಉದ್ಯೋಗ ದೊರಕಿಸುವ ಸಲುವಾಗಿ ಭಾರಿ ವಾಹನ ಚಾಲನೆ, ಶಾರ್ಟ್ ಹ್ಯಾಂಡ್, ಸೆಕ್ಯುರಿಟಿ ಸರ್ವಿಸ್, ಬ್ಯೂಟಿ ಪಾರ್ಲರ್ (ಪುರುಷರಿಗೆ ಮತ್ತು ಮಹಿಳೆಯರಿಗೆ) ಕೋರ್ಸ್ಗಳಿಗೆ ನಿಗಮದ ವತಿಯಿಂದ ತರಬೇತಿ ನೀಡಲಾಗುವುದು.
ಚರ್ಚ್ಗಳ ದುರಸ್ಥಿ/ನವೀಕರಣ/ಜೀರ್ಣೋದ್ದಾರ/ಮೇಲ್ದರ್ಜೆಗಾಗಿ ಸಹಾಯಧನ: 10 ವರ್ಷಗಳ ಮೇಲ್ಪಟ್ಟ ಚರ್ಚ್ಗಳ ದುರಸ್ಥಿ, ನವೀಕರಣ, ಜೀರ್ಣೋದ್ಧಾರ, ಮೇಲ್ದರ್ಜೆಗಾಗಿ ಕಾಮಗಾರಿಯ ಅಂದಾಜು ವೆಚ್ಚದ ಶೇ.50 ರಷ್ಟು ಅಥವಾ ಗರಿಷ್ಟ ರೂ.50 ಲಕ್ಷಗಳು ಯಾವುದು ಕಡಿಮೆಯೋ ಅಷ್ಟು ಅನುದಾನವÀನ್ನು ಒದಗಿಸಲು ಅವಕಾಶ ಕಲ್ಪಿಸಲಾಗಿದೆ.
ಸ್ಮಶಾನಗಳಿಗೆ ಆವರಣ ಗೋಡೆ ನಿರ್ಮಾಣ ಮತ್ತು ಸ್ಮಶಾನಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಸಹಾಯಧನ: ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆಯಡಿ ಕ್ರಿಶ್ಚಿಯನ್ ಸಮುದಾಯದ ಸ್ಮಶಾನಗಳಿಗೆ ಆವರಣಗೋಡೆ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯಗಳ ಕಲ್ಪನೆಗಾಗಿ ಸಹಾಯಧನವನ್ನು ನೀಡಲಾಗುತ್ತದೆ. ಈ ಯೋಜನೆಯ ಉದ್ದೇಶವು ಸ್ಮಶಾನಗಳಿಗೆ ಸಮರ್ಪಕ ರಕ್ಷಣಾ ವ್ಯವಸ್ಥೆ, ನಿರ್ವಹಣೆ ಮತ್ತು ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಸಮುದಾಯದ ದೀರ್ಘಕಾಲದ ಅಗತ್ಯಗಳನ್ನು ಪೂರೈಸುವುದಾಗಿದೆ.
ಅರ್ಹತೆ:
ಅರ್ಜಿದಾರರು ಜಿಲ್ಲೆಯ ಕನಿಷ್ಠ 15 ವರ್ಷದಿಂದ ಖಾಯಂ ನಿವಾಸಿಯಾಗಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ರೂ.6,00,000 ಲಕ್ಷ ಮೀರಬಾರದು. ಕನಿಷ್ಠ 18 ವರ್ಷ ಮತ್ತು ಗರಿಷ್ಠ 55 ವರ್ಷಗಳ ವಯಸ್ಸು ಹೊಂದಿರಬೇಕು. ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಹಾಗೂ ಶೇ.03 ರಷ್ಟು ಅಂಗವಿಕಲರಿಗೆ ಮೀಸಲಾತಿ ಇದೆ.
ಅರ್ಜಿದಾರರು ಆನ್ಲೈನ್ನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಐಎಫ್ಎಸ್ಸಿ ಕೋಡ್ ಇರುವ ಬ್ಯಾಂಕ್ ಖಾತೆ ಪುಸ್ತಕದ ಪ್ರತಿ, ಯೋಜನಾ ವರದಿ ಹಾಗೂ ಅರ್ಜಿದಾರರ ಹಾಗೂ ಜಾಮೀನುದಾರರ ಭಾವಚಿತ್ರಗಳು ಅಪ್ಲೋಡ್ ಮಾಡಬೇಕು.
ಈ ಹಿಂದೆ ನಿಗಮದ ಸೌಲಭ್ಯವನ್ನು ಪಡೆದವರು ಮತ್ತೆ ಸೌಲಭ್ಯವನ್ನು ಪಡೆಯಲು ಅರ್ಹರಿರುವುದಿಲ್ಲ. ಅರ್ಜಿ ಸಲ್ಲಿಸಲು ಆನ್ಲೈನ್ ವೆಬ್ಸೈಟ್ https://kccdconline.karnataka.gov.in/ ಗೆ ಭೇಟಿ ನೀಡಿ ಸಲ್ಲಿಸಬಹುದು. ನವೆಂಬರ್ 30 ಕೊನೆಯ ದಿನವಾಗಿದೆ.ಹೆಚ್ಚಿನ ಮಾಹಿತಿಗಾಗಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಹತ್ತಿರದ ಮೌಲಾನ ಆಜಾದ್ ಭವನದ ಕರ್ನಾಟಕ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ನಿಗಮ (ನಿ) ದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ದೂ.08392-294370 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
