HomeJobsಡಿ. 6 ರಿಂದ ಅಗ್ನಿವೀರ್ ಟ್ರೇಡ್ಸ್ ಮನ್ ಹುದ್ದೆಗಳ ನೇಮಕಾತಿ

ಡಿ. 6 ರಿಂದ ಅಗ್ನಿವೀರ್ ಟ್ರೇಡ್ಸ್ ಮನ್ ಹುದ್ದೆಗಳ ನೇಮಕಾತಿ

ಜಾಟ್ ರೆಜಿಮೆಂಟ್ ಸೆಂಟರ್, ಬರೇಲಿ ಇಲ್ಲಿ ಯು.ಹೆಚ್.ಕ್ಯು. ಕೋಟಾದಡಿಯಲ್ಲಿ ಡಿ.6 ರಿಂದ 16 ರವೆಗೆ ಅಗ್ನಿವೀರ್ ಟ್ರೇಡ್ಸ್ ಮನ್, ಜನರಲ್ ಡ್ಯೂಟಿ ಮತ್ತು ಕ್ಲರ್ಕ್ ಹುದ್ದೆಗೆ ನೇಮಕಾತಿ ನಡೆಯಲಿದೆ.

ಈ ಹುದ್ದೆಗಳಿಗೆ 2004 ರ ಅಕ್ಟೋಬರ್ 01 ರಿಂದ 2008 ರ ಏಪ್ರಿಲ್ 01 ನಡುವೆ ಜನಿಸಿರುವ 17 1/2 ವರ್ಷದಿಂದ 21 ವರ್ಷದೊಳಗಿನ ವೀರ ನಾರಿಯರು, ಮಾಜಿ ಸೈನಿಕರ ಮಕ್ಕಳು ಮತ್ತು ಅವಲಂಬಿತರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂ.ಸಂ; 05812-510596, 2511796/6335 ಅಥವಾ [email protected] ಗೆ ಸಂಪರ್ಕಿಸಬಹುದೆಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು(ಪ್ರ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular