ಉಡುಪಿ: ಮಣಿಪಾಲದ ಲಾಡ್ಜ್ ವೊಂದರಲ್ಲಿ ಅಪ್ರಾಪ್ತೆಯೊಂದಿಗೆ ಬಿಜೆಪಿ ಮುಖಂಡನ ಪುತ್ರ ಸಿಕ್ಕಿ ಬಿದ್ದಿದ್ದು, ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕೇಸ್ ದಾಖಲಾಗಿದೆ.
ಕಟಪಾಡಿ ಮಣಿಪುರದ ಶ್ರೀಕಾಂತ್ ಪೂಜಾರಿ(20) ಬಂಧಿತ ಯುವಕ. ಆರೋಪಿಯನ್ನು ಪೊಲೀಸರು ಬಂಧಿಸಿ ಗುರುವಾರ ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸ್ಥಳೀಯ ಬಿಜೆಪಿ ಮುಖಂಡನ ಪುತ್ರನಾಗಿರುವ ಆರೋಪಿ ಮದುವೆಯಾಗುವುದಾಗಿ ಬಾಲಕಿ ನಂಬಿಸಿ ಮಣಿಪಾಲ್ ಲಾಡ್ಜ್ ಗೆ ಕರೆದುಕೊಂಡು ಹೋಗಿದ್ದಾನೆ. ಆರೋಪಿ ಬಾಲಕಿಯ ನಕಲಿ ಆಧಾರ್ ಕಾರ್ಡ್ ಅನ್ನು ಲಾಡ್ಜ್ ಸಿಬ್ಬಂದಿಗೆ ನೀಡಿದ್ದ.ಮಾಹಿತಿ ತಿಳಿದ ಬಾಲಕಿಯ ಪೋಷಕರು ಪೊಲೀಸರೊಂದಿಗೆ ಲಾಡ್ಜ್ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿರುವ ಬಗ್ಗೆ ಮಾಹಿತಿ ತಿಳಿದು ಮತ್ತೊಬ್ಬ ಬಾಲಕಿ ಕೂಡ ದೂರು ದಾಖಲಿಸಿದ್ದಾಳೆ. ಆಕೆಗೂ ಕೂಡ ಮದುವೆಯಾಗುವುದಾಗಿ ನಂಬಿಸಿ ಲಾರ್ಜ್ ಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದಿದೆ.
