ರಾಜ್ಯದಲ್ಲೇ ಸಿದ್ಧವಾಗಲಿವೆ ‘ಎಐ ಸರ್ವರ್’: ಅಮೆರಿಕ ಕಂಪನಿಯಿಂದ 1500 ಕೋಟಿ ರೂ. ಹೂಡಿಕೆ: ಸಾವಿರಾರು ಉದ್ಯೋಗ ಸೃಷ್ಟಿ

ಬೆಂಗಳೂರು: ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಕಾರ್ಯನಿರ್ವಹಿಸುವ ಅತ್ಯಾಧುನಿಕ ʼಎಐ ಸರ್ವರ್‌ʼಗಳನ್ನು ಅಮೆರಿಕದ ಬುರ್ಕಾನ್‌ ವರ್ಲ್ಡ್‌ ಇನ್‌ವೆಸ್ಟ್‌ಮೆಂಟ್‌ ಗ್ರೂಪ್‌ ಕರ್ನಾಟಕದಲ್ಲೇ ತಯಾರಿಸಲಿದೆ.

ಈ ಕಂಪನಿ ರಾಜ್ಯದಲ್ಲಿ ₹1,500 ಕೋಟಿ ಬಂಡವಾಳ ಹೂಡಲು ಮುಂದೆ ಬಂದಿದೆ. ದೇವನಹಳ್ಳಿ ಸಮೀಪ 10-15 ಎಕರೆ ಭೂಮಿ ನೀಡಲಾಗುವುದು. ಹೂಡಿಕೆಯಿಂದ ತಯಾರಿಕಾ ವಲಯದಲ್ಲಿ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದ್ದಾರೆ.

“AI ತಂತ್ರಜ್ಞಾನದ ಹೊಸ ಯುಗಕ್ಕೆ ಕರ್ನಾಟಕ ಸಜ್ಜಾಗಿದೆ. ಅಮೆರಿಕದ ಬುರ್ಕಾನ್ ವರ್ಲ್ಡ್ ಇನ್ವೆಸ್ಟ್ ಮೆಂಟ್ ನ ಅಂಗ ಸಂಸ್ಥೆಯಾದ TGG (The Ghazi Group – a subsidiary of Burkhan World Investment) ರಾಜ್ಯದಲ್ಲಿ ಸುಮಾರು ₹1,500 ಕೋಟಿ ಹೂಡಿಕೆಮಾಡಿ ಅತ್ಯಾಧುನಿಕ ಎಐ ಸರ್ವರ್ ಉತ್ಪಾದನಾ ಘಟಕ ನಿರ್ಮಿಸಲು ಮುಂದಾಗಿದೆ.

ಈ ಸಂಬಂಧ TGG ಸಿಇಒ ಶಫಿ ಎಂ. ಖಾನ್ ಮತ್ತು ಅವರ ತಂಡದೊಂದಿಗೆ ಹೂಡಿಕೆ ಮತ್ತಿತರ ಸಂಗತಿಗಳ ಬಗ್ಗೆ ವಿಸ್ತೃತ ಮಾತುಕತೆ ನಡೆಸಲಾಯಿತು. ಈ ಸಂದರ್ಭದಲ್ಲಿ ಶಿಗ್ಗಾಂವಿ ಶಾಸಕ ಯಾಸಿರ್ ಅಹಮದ್ ಪಠಾಣ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು, ಕ್ವಾಡ್-ಜೆನ್ ಕಂಪನಿ ಅಧ್ಯಕ್ಷ ಸಿ.ಎಸ್.ರಾವ್ ಉಪಸ್ಥಿತರಿದ್ದರು.

ದೇವನಹಳ್ಳಿ ಸಮೀಪ ಸುಮಾರು 10-15 ಎಕರೆಯಲ್ಲಿ ನೂತನ ಘಟಕ ನಿರ್ಮಾಣವಾಗಲಿದೆ. ಅವರಿಗೆ ನಮ್ಮ ಸರ್ಕಾರದ ವತಿಯಿಂದ ಸಂಪೂರ್ಣ ಸಹಕಾರ ದೊರೆಯಲಿದೆ.

ಅತ್ಯಾಧುನಿಕ ಎಐ ಸರ್ವರ್ ಜೊತೆಗೆ ಸಿಪಿಯು–ಜಿಪಿಯು–AI ನೆಟ್ವರ್ಕ್ ಸ್ವಿಚ್ ಸಹ ಉತ್ಪಾದಿಸಲಿದ್ದು, ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿದೆ. ಜಾಗತಿಕ AI ಹಬ್ ಆಗುವ ದಿಕ್ಕಿನಲ್ಲಿ ಕರ್ನಾಟಕ ಮುನ್ನಡೆಯುತ್ತಿದೆ ಎಂದು ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read