SHOCKING : ‘ಫೋನ್ ಪೇ’ ಮೂಲಕ ಲವ್ವಿಡವ್ವಿ : 9 ನೇ ತರಗತಿ ವಿದ್ಯಾರ್ಥಿನಿಯನ್ನ ‘ಗರ್ಭಿಣಿ’ ಮಾಡಿದ ಭೂಪ ಅರೆಸ್ಟ್.!

ಬೆಂಗಳೂರು : ಫೋನ್ ಪೇ’ ಮೂಲಕ ಲವ್ವಿಡವ್ವಿ ನಡೆಸಿದ ಯುವಕ 9 ನೇ ತರಗತಿ ವಿದ್ಯಾರ್ಥಿನಿಯನ್ನ ಗರ್ಭಿಣಿ ಮಾಡಿ ಇದೀಗ ಜೈಲು ಸೇರಿದ್ದಾನೆ.

ಹೌದು, ರಾಯಚೂರು ಜಿಲ್ಲೆಯ ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆರೋಪಿ ಶಿವಮೂರ್ತಿ (25) ಮಾಡಿದ ತಪ್ಪಿಗೆ ಕಂಬಿ ಎಣಿಸುತ್ತಿದ್ದಾನೆ. ಈತನ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ.

ಹೇಗಾಯ್ತು ಇದೆಲ್ಲಾ..?

ಸಂತ್ರಸ್ತ ಬಾಲಕಿಯ ತಂದೆ ಚಿಕನ್ ಶಾಪ್ ಹೊಂದಿದ್ದರು. ಅಲ್ಲಿಗೆ ಮಾಂಸ ಖರೀದಿಗೆ ಅಂತ ಶಿವಮೂರ್ತಿ ಬರ್ತಾನೆ. ನಂತರ ಫೋನ್ ಫೇ ಮೂಲಕ ಹಣ ಪಾವತಿಸಿದ್ದಾನೆ. ಈ ಮೂಲಕ ನಂಬರ್ ಪಡೆದ ಭೂಪ ಬಾಲಕಿಯನ್ನು ಪರಿಚಯ ಮಾಡಿಕೊಂಡು ಲವ್ವಿ ಡವ್ವಿ ನಡೆಸಿದ್ದಾನೆ. ಪ್ರೀತಿಯಿಂದ ಕೊನೆಗೆ ದೈಹಿಕ ಸಂಬಂಧ ಹೊಂದುವವರೆಗೆ ಹೋಗಿದೆ. ನಂತರ ಒಂದು ದಿನ ಬಾಲಕಿ ಮಿಸ್ಸಿಂಗ್ ಆಗುತ್ತಾಳೆ. ಪೋಷಕರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸುತ್ತಾರೆ. ಪೊಲೀಸರು ಪ್ರಕರಣದ ವಿಚಾರಣೆ ನಡೆಸಿದಾಗ ಬಾಲಕಿ ಗರ್ಭಿಣಿ ಅನ್ನೋ ವಿಷಯ ಬೆಳಕಿಗೆ ಬರುತ್ತೆ. ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read