ಚಿಕ್ಕಮಗಳೂರು: ವಾಯುವಿಹಾರಕ್ಕೆಂದು ಹೋಗಿದ್ದ 75 ವರ್ಷದ ವೃದ್ಧ ವೈದ್ಯರೊಬ್ಬರು ದಾರಿ ತಪ್ಪಿ ಅರಣ್ಯದೊಳಗೆ ಹೋಗಿ ನಾಪತ್ತೆಯಾಗಿದ್ದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಜಿಲ್ಲೆಯ ಕೊಪ್ಪ ತಾಲೂಕಿನ ಕಾಡಂಚಿನ ಗುಣವಂತೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಾಲ್ಕು ದಿನಗಳಿಂದ ಅರಣ್ಯದಲ್ಲಿ ನಾಪತ್ತೆಯಾಗಿದ್ದ ವೈದ್ಯರೊಬ್ಬರನ್ನು ಶ್ವಾನ ದಳ ಪತ್ತೆ ಮಾಡಿದೆ.
ನವೆಂಬರ್ 2 ರಂದು ವಾಯುವ್ಹಾರಕ್ಕೆಂದು ಹೋಗಿದ್ದ ವೃದ್ಧ ವೆಂಕಟೇಗೌಡ ದಾರಿ ತಪ್ಪಿ ಕಾಡು ಸೇರಿದ್ದರು. ಅವರಿಗೆ ಮರೆವಿನ ಕಾಯಿಲೆ ಬೇರೆ ಇದ್ದಿದ್ದರಿಮ್ದ ವಾಪಸ್ ಮನೆಗೆ ಬರು ಗೊತ್ತಾಗಿಲ್ಲ. ನಾಲ್ಕು ದಿನಗಳ ಕಾಲ ಅರಣ್ಯದೊಳಗೆ ಸುತ್ತಾಡಿದರೂ ಮನೆಯ ದಾರಿ ಹುಡುಕಲು ಸಾಧ್ಯವಗದೇ ಪರದಾಡಿದ್ದಾರೆ.
ಇತ್ತ ಕುಟುಂಬದವರೂ ವೆಂಕಟೇಗೌಡ ಅವರಿಗಾಗಿ ಹುಡುಕಾಟ ನಡೆಸಿ ಬಳಿಕ ಎಲ್ಲಿಯೂ ಕಾಣದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಶ್ವಾನ ದಳದೊಂದಿಗೆ ಹುಡುಕಾಟ ನಡೆಸಿದಾಗ ಕಡಂಚಿನ ಮನೆಯೊಂದರಲ್ಲಿ ನೀರು ಕುಡಿದು ಹೋಗಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು. ಎಸ್ ಪಿ ವಿಕ್ರಂ ಆಮ್ಟೆ ಸೂಚನೆ ಮೇರೆಗೆ ಶ್ವಾನದಳ ತಂದು ಕಾಡಿನಲ್ಲಿ ಹುಡುಕಾಟ ನಡೆಸಿದಾಗ ವೆಂಕಟಗೌಡರು ಇರುವ ಜಾಗವನ್ನು ಶ್ವಾನ ಪತ್ತೆ ಮಾಡಿದೆ.
ಪಂಚೆ ವಾಸನೆಯ ಜಾಡು ಹೊಡಿದು ಕಾಡಿನಲ್ಲಿ 5 ಕಿ.ಮೀ ದೂರ ಸಾಗಿದ ಶ್ವಾನ ವೃದ್ಧರನ್ನು ಪತ್ತೆ ಮಾಡಿದೆ. ನಾಲ್ಕುದಿನಗಳಿಂದ ಕಾಡಿನಲ್ಲಿಯೇ ಇದ್ದ ವೃದ್ಧ ವೈದ್ಯ ಸದ್ಯ ಸುರಕ್ಷಿತವಾಗಿ ಮನೆ ಸೇರಿದ್ದಾರೆ.
