ದಾವಣಗೆರೆ: ಜಿಲ್ಲೆಯ ವಿವಿಧ ಬ್ಯಾಂಕುಗಳು ಹಾಗೂ ಆರ್ಥಿಕ ಸಂಸ್ಥೆಗಳಲ್ಲಿ ಕಳೆದ ಹತ್ತು ವರ್ಷಗಳಿಗಿಂತಲೂ ಹೆಚ್ಚು ಕಾಲ ಚಾಲ್ತಿಯಲ್ಲಿಲದ ಬ್ಯಾಂಕ್ ಖಾತೆಗಳು ನಿಷ್ಕ್ರಿಯಗೊಂಡು ಅನಾಮತ್ತಾಗಿರುತ್ತವೆ. ಇಂತಹ ಒಟ್ಟು 2,67,000. ಬ್ಯಾಂಕ್ ಖಾತೆಗಳು ಇದ್ದು ಈ ಖಾತೆಗಳಲ್ಲಿ ಒಟ್ಟು ಮೊತ್ತ ರೂ.61.68 ಕೋಟಿ ಇರುತ್ತದೆ.
ಸಾರ್ವಜನಿಕರ ಉಳಿತಾಯ ಖಾತೆಗಳು, ನಿಶ್ಚಿತ ಠೇವಣಿ ಖಾತೆಗಳು, ಮ್ಯೂಚಯಲ್ ಫಂಡ್ಸ್, ಷೇರುಗಳು, ವಿಮಾ ಪಾಲಿಸಿಗಳು ಹಾಗು ಭವಿಷ್ಯ ನಿಧಿ ಖಾತೆಗಳನ್ನು ಒಳಗೊಂಡಿದ್ದು, ಅವುಗಳು ಕಳೆದ ಹತ್ತು ವರ್ಷಗಳ ಧೀರ್ಘ ಕಾಲದಿಂದ ಚಲನ ರಹಿತವಾಗಿವೆ. ಸಾರ್ವಜನಿಕರು ನಾಗರಿಕರು, ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ ಇಂತಹ ಖಾತೆಗಳು ಅಥವಾ ಹೂಡಿಕೆಗಳು ಇದ್ದರೆ ಅವುಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡು ಲಭ್ಯವಿರುವ ಹಣವನ್ನು ಹಿಂಪಡೆಯಲು ನಮ್ಮ ಹಣ ನಮ್ಮ ಹಕ್ಕು ಎಂಬ ವಿಶೇಷ ಅಭಿಯಾನದ ಮೂಲಕ ಅವಕಾಶ ನೀಡಲಾಗಿದೆ.
ಈ ಅನಾಮತ್ತಾದ ಮರುಚಾಲನೆಗೊಳಿಸಲು ಅಗತ್ಯ ದಾಖಲೆಗಳಾದ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್. ಅಥವಾ ನಿಷ್ಕ್ರಿಯಗೊಂಡ(ಮೃತರಾಗಿದ್ದಲ್ಲಿ) ಗ್ರಾಹಕರ ಮರಣ ಪ್ರಮಾಣ ಪತ್ರ ವಿಳಾಸ, ಗುರುತಿನ ದಾಖಲೆಗಳನ್ನು ಕೆವೈಸಿ ಖಾತೆಗಳನ್ನು ಒದಗಿಸುವುದು ಕಡ್ಡಾಯವಾಗಿರುತ್ತದೆ.
ಈ ಕೆಳಕಾಣಿಸಿದ ಅಧಿಕೃತ ಜಾಲತಾಣಗಳ ಮೂಲಕ ನಿಷ್ಕ್ರಿಯ ಅಥವಾ ಅನಾಮತ್ತಾದ ಖಾತೆಗಳನ್ನು ಪರಿಶೀಲಿಸಬಹುದು.
ಬ್ಯಾಂಕ್ ಠೇವಣಿ (Unclaimed Deposits): https://udgam.rbi.org.in – (RBI UDGAM ಪೋರ್ಟಲ್)
ಮ್ಯೂಚಯಲ್ ಫಂಡ್ಸ್: https://www.camsonline.com/Investors/Unclaimed-Dividend https://www.kfintech.com www.mfcentral.com
ಷೇರುಗಳು ಮತ್ತು ಲಾಭಾಂಶ:(IEPF): https://www.iepf.gov.in, ವಿಮಾ ಪಾಲಿಸಿಗಳು (LIC): https://licindia.in ಅಥವಾ ಸಂಬಂಧಿತ www.bimabharosa.irdai.gov.in
ಭವಿಷ್ಯ ನಿಧಿ: https://unifiedportal-mem epfindia.gov.in www.pfrda.org.in
ನಾಗರಿಕರು ತಮ್ಮ ಅಥವಾ ತಮ್ಮ ಕುಟುಂಬದ ಸದಸ್ಯರ ಹೆಸರಲ್ಲಿ ಅಥವಾ ಮರಣಹೊಂದಿರುವವರ ಹೆಸರಲ್ಲಿ ಇಂಥಹ ನಿಧಿ, ಖಾತೆಗಳು ಇದ್ದಲ್ಲಿ ಸಂಬಂಧಿಸಿದ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಲಭ್ಯವಿರುವ ಹಣವನ್ನು ಹಿಂಪಡೆಯಬಹುದು. ಕಷ್ಟಪಟ್ಟು ಸಂಪಾದಿಸಿದ ತಮ್ಮ ಹಕ್ಕಿನ ಹಣವನ್ನು ಪಾರದರ್ಶಕವಾಗಿ ಹಾಗೂ ಯಾವುದೇ ವಿಳಂಬವಿಲ್ಲದೆ ಪಡೆಯುವಂತೆ ಮಾಡಲು ಇದರ ಉದ್ದೇಶವಾಗಿದೆ. ಹೆಚ್ಚಿನ ಮಾಹಿತಿಗಾಗಿ ದಾವಣಗೆರೆ ಜಿಲ್ಲಾ ಲೀಡ್ ಬ್ಯಾಂಕ್ ಅಥವಾ ಸಂಬಂಧಿಸಿದ ಬ್ಯಾಂಕ್ ಸಂಬಂಧಿಸಿದ ಹಣಕಾಸು ಸಂಸ್ಥೆಗಳನ್ನು ಸಂಪರ್ಕಿಸಬಹುದೆಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ತಿಳಿಸಿದ್ದಾರೆ.
