ಲೋಕಾಯುಕ್ತಕ್ಕೆ ಆಸ್ತಿ ವಿವರವನ್ನು ಸಲ್ಲಿಸದ ಶಾಸಕರ ಪಟ್ಟಿ ಬಿಡುಗಡೆ ಮಾಡಲಾಗಿದೆ. 2024- 25 ನೇ ಸಾಲಿನಲ್ಲಿ ಆಸ್ತಿ ವಿವರ ಸಲ್ಲಿಸಿದ ಶಾಸಕರ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಶಾಸಕರಾದ ಕೆ.ಎನ್. ರಾಜಣ್ಣ, ಲಕ್ಷ್ಮಣ ಸವದಿ, ಖನಿಜಾ ಫಾತಿಮಾ, ಜನಾರ್ಧನ ರೆಡ್ಡಿ, ವಿನಯ್ ಕುಲಕರ್ಣಿ, ಸಂಗಮೇಶ್ವರ, ನಯನ ಮೋಟಮ್ಮ, ಬಿ. ಸುರೇಶ್ ಗೌಡ, ಕೆ. ಗೋಪಾಲಯ್ಯ, ಸಿ.ಪಿ. ಯೋಗೇಶ್ವರ್, ಹೆಚ್.ಡಿ. ರೇವಣ್ಣ, ಪುಟ್ಟರಂಗಶೆಟ್ಟಿ ಸೇರಿದಂತೆ 66 ವಿಧಾನಸಭಾ ಸದಸ್ಯರು ಆಸ್ತಿ ವಿವರ ಸಲ್ಲಿಸಿಲ್ಲ.
ಸಚಿವರಾದ ಕೆ.ಹೆಚ್. ಮುನಿಯಪ್ಪ, ದಿನೇಶ್ ಗುಂಡೂರಾವ್, ಜಮೀರ್ ಅಹ್ಮದ್ ಖಾನ್, ರಹೀಂ ಖಾನ್, ಕೆ. ವೆಂಕಟೇಶ್ ಆಸ್ತಿ ವಿವರ ಸಲ್ಲಿಸಿಲ್ಲ ಎಂದು ಹೇಳಲಾಗಿದೆ.
