ಚಿಕ್ಕಮಗಳೂರು: ಜಮೀನು ಸರ್ವೆ ವೇಳೆ ವ್ಯಕ್ತಿಯೋರ್ವ ದೈವ ಬಂತೆಂದು ಅಧಿಕಾರಿಗಳನ್ನು ಹೆದರಿಸಲು ಯತ್ನಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಲುರಿನ ಕೊಪ್ಪ ತಾಲೂಕಿನ ಚಿಕ್ಕನಗುಂಡಿ ಗ್ರಾಮದಲ್ಲಿ ಅಧಿಕಾರಿಗಳು ಜಮೀನು ಸರ್ವೆ ಕಾರ್ಯಕ್ಕೆ ಆಗಮಿಸಿದ್ದರು. ಈ ವೇಳೆ ಸುರೇಶ್ ಎಂಬ ವ್ಯಕ್ತಿ, ದವ ಮೈಮೇಲೆ ಬಂದಿದೆ ಎಂದು ಹೇಳಿ ಕೈಯಲ್ಲಿ ಬೆಂಕಿ ಹಿಡಿದುಕೊಂಡು ಬಂದು ಅತ್ತಿಂದಿತ್ತ ಓಡಾಡಿ ಹೈಡ್ರಾಮಾ ಮಾಡಿದ್ದಾನೆ. ಓಡಿ ಬಂದು ನಿಂತಿದ್ದ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆ ಕಂಡು ಸರ್ವೆ ಕಾರ್ಯಕ್ಕೆ ಬಂದಿದ್ದ ಅಧಿಕಾರಿಗಳು, ಪೊಲೀಸರು ದಂಗಾಗಿದ್ದಾರೆ.
ಸುರೇಶ್ ಹಾಗೂ ಅಣ್ಣ ತಮ್ಮಂದಿರ ನಡುವೆ ಪಿತ್ರಾರ್ಜಿತ ಆಸ್ತಿಗಾಗಿ ಗಲಾಟೆಯಾಗಿತ್ತು. ಸರ್ವೆ ನಡೆಸುವಂತೆ ಕೊಪ್ಪ ಕೋರ್ಟ್ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಸರ್ವೆ ಕಾರ್ಯಕ್ಕೆಂದು ಅಧಿಕಾರಿಗಳು ಜಮೀನಿಗೆ ಬಂದಿದ್ದ ವೇಳೆ ವ್ಯಕ್ತಿ ಹೈಡ್ರಾಮಾ ಮಾಡಿದ್ದಾನೆ.
