ಬೆಂಗಳೂರು : ಬೆಂಗಳೂರು ಸೇರಿದಂತೆ ದೇಶದ ಹಲವು ಕಡೆ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದ ಮಹಿಳಾ ಟೆಕ್ಕಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಮಹಿಳೆಯನ್ನು ಗುಜರಾತ್ ಮೂಲದ ರೆನೆ ಜೋಶಿಲ್ದಾ ಎಂದು ಗುರುತಿಸಲಾಗಿದೆ. ಈಕೆ ಗುಜರಾತ್ ಮೂಲದ ಟೆಕ್ಕಿ ಆಗಿದ್ದು, ಬೆಂಗಳೂರಿನ 7 ಶಾಲೆ ಸೇರಿ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದಳು.
ಬೆಂಗಳೂರು ಮಾತ್ರವಲ್ಲದೇ ಚೆನ್ನೈ, ಗುಜರಾತ್, ಹೈದರಾಬಾದ್ ಸೇರಿದಂತೆ ಹಲವು ಕಡೆ ಶಾಲೆಗಳಿಗೆ ಈಕೆ ಬೆದರಿಕೆ ಸಂದೇಶ ಕಳುಹಿಸಿದ್ದಳು. ಸೈಬರ್ ಕ್ರೈಮ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
