ಉಡುಪಿ: ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ್ ವಿ.ಬಡಿಗೇರ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಉಡುಪಿ ನಗರ ಠಾಣೆಗೆ ಬಂದು ಕೇವಲ ಏಳು ತಿಂಗಳಾಗಿತ್ತು. ಇದೀಗ ಅವರನ್ನು ಮತ್ತೆ ವರ್ಗಾವಣೆ ಮಾಡಲಾಗಿದೆ. ಉಡುಪಿ ನಗರ ಠಾಣೆಯಿಂದ ಬೆಳಗಾವಿ ನಗರ ವಿಶೇಷ ಶಾಖೆಗೆ ಮಂಜುನಾಥ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಮಂಜುನಾಥ್ ಅವರಿಂದ ತೆರವಾಗಿರುವ ಉಡುಪಿ ನಗರ ಠಾಣೆ ಪೊಲೀಸ್ ನಿರೀಕ್ಷಕರ ಹುದ್ದೆಗೆ ಈವರೆಗೂ ಯಾವುದೇ ನೇಮಕವಾಗಿಲ್ಲ.
