ಚಿಕ್ಕಬಳ್ಳಾಪುರ : ಮಹಿಳೆಯ ಕಿರುಕುಳಕ್ಕೆ ಬೇಸತ್ತು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಂತಾಮಣಿ ತಾಲೂಕಿನ ಮೂಡಚಿಂತಹಳ್ಳಿಯಲ್ಲಿ ನಡೆದಿದೆ. ಕಾಚನಹಳ್ಳಿ ಕೆರೆ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕ ನಿಖಿಲ್ ಕುಮಾರ್ (19) ಶವ ಪತ್ತೆಯಾಗಿದೆ.
ಏನಿದು ಘಟನೆ
ಆತ್ಮಹತ್ಯೆ ಮಾಡಿಕೊಂಡ ಯುವಕ ನಿಖಿಲ್ ಕುಮಾರ್ 38 ವರ್ಷದ ಮಹಿಳೆ ಶಾರದಾ ಜೊತೆ ಅಕ್ರಮ ಸಂಬಂಧ ಹೊಂದಿದ್ದನು. ಶಾರದಾ ಪತಿಗೆ ವಿಚ್ಚೇದನ ನೀಡಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಪೋಷಕರ ಕಣ್ಣುತಪ್ಪಿಸಿ ಆಕೆ ಯುವಕನನ್ನು ಹೊರಗಡೆ ಕರೆದುಕೊಂಡು ಹೋಗುತ್ತಿದ್ದಳು.
ಪೋಷಕರ ವಿರೋಧದದ ನಡುವೆಯೂ ಶಾರದಾ ಯುವಕನನ್ನ ಬಿಟ್ಟಿರಲಿಲ್ಲ. ಇಬ್ಬರು ಮಕ್ಕಳ ಜೊತೆ ಮೂಡಚಿಂತಹಳ್ಳಿಯಲ್ಲಿ ವಾಸವಾಗಿದ್ದಳು. ಮಹಿಳೆಯ ಕಿರುಕುಳಕ್ಕೆ ಬೇಸತ್ತು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದ್ದು, ಶಾರದಾ ವಿರುದ್ಧ ಯುವಕನ ಪೋಷಕರು ದೂರು ನೀಡಿದ್ದಾರೆ. ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
