ಕರ್ನಾಟಕ ಅಲ್ಪಸಂಖ್ಯಾತರ ಆಭಿವೃದ್ದಿ ನಿಗಮ ಶಿವಮೊಗ್ಗ ಜಿಲ್ಲೆ ವತಿಯಿಂದ 2025-26 ನೇ ಸಾಲಿಗೆ ಅರಿವು ನವೀಕರಣ ಸಾಲ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಸ್ಲಿಂ, ಜೈನ್ಸ್, ಬೌದ್ಧರು, ಸಿಖ್ಖರು, ಪಾರ್ಸಿಗಳು ಸಮುದಾಯದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಯಾಗಿರುವ ನವೀಕರಣ/ ಸಿಇಟಿ/ ನೀಟ್/ ಪಿಜಿಸಿಇಟಿ/ ಪಿಜಿನೀಟ್/ಡಿಸಿಇಟಿ ಮೂಲಕ ಪದವಿ ಮತ್ತು ಸ್ನಾತಕೋತ್ತರ ವೃತ್ತಿಪರ ಕೋರ್ಸ್ಗಳಾದ ಎಂಬಿಬಿಎಸ್, ಎಂಡಿ ಎಂಎಸ್, ಬಿಡಿಎಸ್, ಎಂಡಿಎಸ್, ಬಿ-ಆಯುಷ್, ಎಂ-ಆಯುಷ್, ಬಿಇ, ಬಿ-ಟೆಕ್, ಎಂಇ, ಎಂ-ಟೆಕ್, ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್, ಎಂ- ಆರ್ಕಿಟೆಕ್ಚರ್, ಎಂಬಿಎ, ಎಂಸಿಎ, ಎಲ್‌ಎಲ್‌ಬಿ, ಬಿಎಸ್ಸಿ ಇನ್ ಆರ್ಟಿಕಲ್ಚರ್, ಅರ್ಗಿಕಲ್ಚರಲ್ ಇಂಜಿನಿರಿAಗ್, ಡೈರಿ ಟೆಕ್ನಾಲಜಿ, ಫಾರೆಸ್ಟಿç, ವೆಟರ್ನರಿ ಅಂಡ್ ಅನಿಮಲ್ ಟೆಕ್ನಾಲಜಿ, ಫರ‍್ಸಿ, ಸಿರಿಕಲ್ಚರ್, ಹೋಮ್/ಕಮ್ಯುನಿಟಿ ಸೈನ್ಸ್ ಫುಡ್ ನ್ಯೂಟ್ರಿಶಿಯನ್ ಅಂಡ್ ಡೈಯಟಿಕ್ಸ್, ಬಿ-ಫಾರ್ಮಾ, ಎಂ-ಫಾರ್ಮಾ, ಫಾರ್ಮಾ ಡಿ ಅಂಡ್ ಡಿ ಫಾರ್ಮಾಗಳಲ್ಲಿ ಆಯ್ಕೆಯಾಗಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ವಿದ್ಯಾರ್ಥಿಗಳು ಹಿಂದಿನ ವರ್ಷದಲ್ಲಿ ಪಡೆದ ಸಾಲದ ಮೊತ್ತಕ್ಕೆ ಶೇ.12 ರಷ್ಟು ಹಣವನ್ನು ಪಾವತಿಸಿ ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬಹುದಾಗಿದೆ.
ಅರ್ಜಿಯನ್ನು kmdconline.karnataka.gov.in ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಭರ್ತಿ ಮಾಡಿ ಅರ್ಜಿ ಪ್ರಿಂಟ್‌ಔಟ್ ತೆಗೆದು ಅದಕ್ಕೆ ಸ್ಟಡಿ ಸರ್ಟಿಫಿಕೇಟ್, ಕಾಲೇಜ್ ಶುಲ್ಕ ರಶೀದಿ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಹಿಂದಿನ ವರ್ಷದಲ್ಲಿ ಉತ್ತೀರ್ಣರಾಗಿರುವ ಅಂಕಪಟ್ಟಿ, ಕಾಲೇಜ್ ಬ್ಯಾಂಕ್ ಮಾಹಿತಿ, ಶೇ.12 ರಷ್ಟು ಲೋನ್ ಹಣವನ್ನು ಪಾವತಿಸಿರುವ ರಶೀದಿ, ಕೆಇಎ ಅಡ್ಮಿಶನ್ ಆರ್ಡನ್ ಕಾಪಿ, ಅಧಾರ್ ಕಾರ್ಡ್, ಜಾತಿ/ಆದಾಯ ಪ್ರಮಾಣ ಪತ್ರ(8 ಲಕ್ಷದೊಳಗೆ), ವಿದ್ಯಾರ್ಥಿ/ ಪೋಷಕರ ಭಾವಚಿತ್ರ, ಇಂಡಿಮ್ನಿಟಿ ಬಾಂಡ್ ವಿಥ್ ನೋಟರಿ ಹಾಗೂ ವಿದ್ಯಾರ್ಥಿ ಮತ್ತು ಪೋಷಕರ ಸೆಲ್ಫ್ ಡಿಕ್ಲರೇಷನ್ ಲೇಟರ್‌ಗಳ ದಾಖಲಾತಿಗಳೊಂದಿಗೆ ಜಿಲ್ಲಾ ವ್ಯವಸ್ಥಾಪಕ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ, ಅಚ್ಚುತರಾವ್ ಲೇಔಟ್ 4 ನೇ ತಿರುವು ನಂಜಪ್ಪ ಆಸ್ಪತ್ರೆ ಮುಂಭಾಗ ಶಿವಮೊಗ್ಗ ಇವರಿಗೆ ಡಿ. 03 ರೊಳಗಾಗಿ ಸಲ್ಲಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಕೆಇಎ ನಿಂದ ಆಯ್ಕೆಯಾಗಿದ್ದು, ಬೇರೆ ಬೇರೆ ವರ್ಷಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಅರಿವು ವಿದ್ಯಾಭ್ಯಾಸ ಸಾಲ ಪಡೆಯದಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಬಹುದಾಗಿದ್ದು, ನವೀಕರಣ ಮೊತ್ತವನ್ನು ಪಾವತಿಸುವಂತಿಲ್ಲ.ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08182-228262 ಗೆ ಸಂಪರ್ಕಿಸಬಹುದು.
