HomeLatest NewsBIG NEWS: ಲಾ ಪರೀಕ್ಷೆ: ಕಾನೂನು ವಿದ್ಯಾರ್ಥಿಗಳಿಗೆ ಕನಿಷ್ಠ ಹಾಜರಾತಿ ಕಡ್ಡಾಯವಲ್ಲ: ಹೈಕೋರ್ಟ್ ತೀರ್ಪು

BIG NEWS: ಲಾ ಪರೀಕ್ಷೆ: ಕಾನೂನು ವಿದ್ಯಾರ್ಥಿಗಳಿಗೆ ಕನಿಷ್ಠ ಹಾಜರಾತಿ ಕಡ್ಡಾಯವಲ್ಲ: ಹೈಕೋರ್ಟ್ ತೀರ್ಪು

ನವದೆಹಲಿ: ಲಾ ಪರೀಕ್ಷೆಗಳಿಗೆ ಕನಿಷ್ಠ ಹಾಜರಾತಿ ಕಡ್ಡಾಯವಲ್ಲ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ. ಕನಿಷ್ಠ ಹಾಜರಾತಿ ಕೊರತೆಯ ಕಾರಣಕ್ಕೆ ದೇಶದ ಯಾವುದೇ ಕಾನೂನು ವಿದ್ಯಾರ್ಥಿಯನ್ನು ಪರೀಕ್ಷೆಗೆ ಕುಳಿತುಕೊಳ್ಳದಂತೆ ತಡೆಯಬಾರದು ಎಂದು ದೆಹಲಿ ಹೈಕೋರ್ಟ್ ಸೋಮವಾರ ತೀರ್ಪು ನೀಡಿದೆ.

2016ರಲ್ಲಿ ಸುಶಾಂತ್ ರೋಹಿಲಾ ಎಂಬ ವಿದ್ಯಾರ್ಥಿಗೆ ಕನಿಷ್ಠ ಹಾಜರಾತಿ ಇಲ್ಲದ ಕಾರಣ ಪರೀಕ್ಷೆಗೆ ಕುಳಿತುಕೊಳ್ಳಲು ಅಮಿಟಿ ವಿಶ್ವವಿದ್ಯಾಲಯ ನಿರಾಕರಿಸಿದ್ದು, ಇದರಿಂದ ಮನನೊಂದ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಪ್ರಕರಣದ ವಿಚಾರಣೆ ನಡೆಸಿದ ದೆಹಲಿಗೆ ಹೈಕೋರ್ಟ್, ಕನಿಷ್ಠ ಹಾಜರಾತಿ ಕೊರತೆಯ ಕಾರಣ ಭಾರತದಲ್ಲಿನ ಯಾವುದೇ ಮಾನ್ಯತೆ ಪಡೆದ ಕಾನೂನು ಕಾಲೇಜು, ವಿಶ್ವದ್ಯಾಲಯ ಅಥವಾ ಸಂಸ್ಥೆಯಲ್ಲಿ ದಾಖಲಾದ ಯಾವುದೇ ವಿದ್ಯಾರ್ಥಿಯನ್ನು ಪರೀಕ್ಷೆ ಬರೆಯುವುದರಿಂದ ತಪ್ಪಿಸಬಾರದು ಅಥವಾ ವೃತ್ತಿ ಜೀವನದ ಪ್ರಗತಿಯ ಮುಂದಿನ ಅನ್ವೇಷಣೆಗಳಿಂದ ತಡೆಯಬಾರದು ಎಂದು ತಿಳಿಸಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular