ಹೈದರಾಬಾದ್: ತೆಲಂಗಾಣದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 17 ಜನ ಸಾವನ್ನಪ್ಪಿದ್ದಾರೆ. ಸರ್ಕಾರಿ ಬಸ್ ಮೇಲೆ ಟಿಪ್ಪರ್ ಮಗಚಿ ಬಿದ್ದು 17 ಜನ ಸಾವನ್ನಪ್ಪಿದ್ದಾರೆ. ಮಿರ್ಜಾಗೂಡ ಗ್ರಾಮದ ಬಳಿ ಅಪಘಾತ ಸಂಭವಿಸಿದೆ.
ರಂಗಾರೆಡ್ಡಿ ಜಿಲ್ಲೆಯ ಚೇಬಳ್ಳ ತಾಲೂಕಿನ ಮಿರ್ಜಾಗೂಡ ಬಳಿ ಅಪಘಾತ ಸಂಭವಿಸಿದೆ. ಬಸ್ ಮೇಲೆ ಜಲ್ಲಿಕಲ್ಲು ತುಂಬಿದ್ದ ಟಿಪ್ಪರ್ ಮಗುಚಿಬಿದ್ದು ಅಪಘಾತ ಸಂಭವಿಸಿದೆ. ತೆಲಂಗಾಣದ ಸರ್ಕಾರಿ ಬಸ್ ನಲ್ಲಿ 40 ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ 17 ಜನ ಸಾವ್ನಪ್ಪಿದ್ದು, ಮೃತಪಟ್ಟವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಟಿಪ್ಪರ್ ಚಾಲಕನ ಅತಿವೇಗವೇ ಅಪಘಾತಕ್ಕೆ ಕಾರಣವಾಗಿದೆ. ಟಿಪ್ಪರ್ ಮಗುಚಿದ್ದರಿಂದ ಬಸ್ ನಲ್ಲಿ ಜಲ್ಲಿಕಲ್ಲುಗಳು ತುಂಬಿಕೊಂಡಿವೆ. ಗಾಯಗೊಂಡ ಹಲವರ ಸ್ಥಿತಿ ಚಿಂತಾಜನಕವಾಗಿದೆ.
