ಸೊರಬ : ಅಂಗನವಾಡಿ ಸಹಾಯಕಿಯೋರ್ವಳು ಕಾದ ಚಾಕುವಿನಿಂದ ಮಗುವಿನ ಗಲ್ಲಕ್ಕೆ ಬರೆ ಹಾಕಿದ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಿಕ್ಕಸವಿ ಗ್ರಾಮದಲ್ಲಿ ನಡೆದಿದೆ.
ಚಿಕ್ಕಸವಿ ಗ್ರಾಮದ ಚಂದ್ರಪ್ಪ ಮತ್ತು ನಂದಿನಿ ದಂಪತಿಯ ಮಗು ಯೋಧ ಮೂರ್ತಿ ಮೇಲೆ ಈ ಕೃತ್ಯ ಎಸಗಲಾಗಿದೆ.
ಅಂಗನವಾಡಿಯಲ್ಲಿ ಯೋಧಮೂರ್ತಿ ಹಾಗೂ ಇನ್ನೊಂದು ಮಗು ಜಗಳವಾಡುತಿತ್ತು. ನಂತರ ಯೋಧಮೂರ್ತಿ ಆ ಮಗುವಿಗೆ ಕಚ್ಚಿದ್ದಾನೆ. ಇದರಿಂದ ಸಿಟ್ಟಾದ ಸಹಾಯಕಿ ಚಾಕುವನ್ನು ಬೆಂಕಿಯಲ್ಲಿ ಕಾಸಿ ಗಲ್ಲಕ್ಕೆ ಬರೆ ಎಳೆದಿದ್ದಾಳೆ. ಸುಟ್ಟ ಗಾಯದಿಂದ ಜೋರಾಗಿ ಕಿರುಚಾಡಿದ ಮಗು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿನ ಪೋಷಕರು ಸೊರಬ ಪೊಲೀಸ್ ಠಾಣೆಯಲ್ಲಿ ಸಹಾಯಕಿ ಹೇಮಮ್ಮ ವಿರುದ್ಧ ದೂರು ದಾಖಲಿಸಿದ್ದಾರೆ

 
			 
		 
		 
		 
		 Loading ...
 Loading ... 
		 
		 
		