ಹೃದಯಾಘಾತ ಚಿಕಿತ್ಸೆಗೆ ಸಿಗದ ಆರ್ಥಿಕ ನೆರವು: ಪ್ರಶಸ್ತಿಗಳಿಗೆ ಬೆಂಕಿ ಹಚ್ಚಿ ಸಾಹಿತಿ ‘ಹರಿಹರಪ್ರಿಯ’ ಆಕ್ರೋಶ

ಕೋಲಾರ: ಹೃದಯಾಘಾತಕ್ಕೆ ಒಳಗಾಗಿ ಸಾಕಷ್ಟು ಹಣ ಖರ್ಚು ಮಾಡಿ ಚಿಕಿತ್ಸೆ ಪಡೆದರೂ ರಾಜ್ಯ ಸರ್ಕಾರ ಇಲ್ಲವೇ ಸಂಘ-ಸಂಸ್ಥೆಗಳು ಆರ್ಥಿಕ ಸಹಕಾರ ನೀಡದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಹಿರಿಯ ಸಾಹಿತಿ, ಪುಸ್ತಕ ಮನೆಯ ಹರಿಹರಪ್ರಿಯ ಅವರು ತಮ್ಮ ಸಾಹಿತ್ಯ ಸೇವೆಗಾಗಿ ಬಂದ ಎಲ್ಲಾ ರೀತಿಯ ಪ್ರಶಸ್ತಿ ಪತ್ರಗಳು, ಸನ್ಮಾನ ಫಲಕಗಳನ್ನು ಸುಟ್ಟುಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಲೂರು -ಹೊಸೂರು ಮುಖ್ಯರಸ್ತೆಯ ಲಕ್ಕೂರು ಗ್ರೀನ್ ಸಿಟಿ ಕಾಲೇಜಿನ ಸಮೀಪ ಪುಸ್ತಕ ಮನೆಯ ಆವರಣದಲ್ಲಿ ಹರಿಹರಪ್ರಿಯ ಅವರು ವಾಸವಾಗಿದ್ದಾರೆ. ಒಂದು ವರ್ಷದ ಹಿಂದೆ ಹೃದಯಾಘಾತಕ್ಕೆ ಒಳಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.

ಆಸ್ಪತ್ರೆಯ ಖರ್ಚು ವೆಚ್ಚಗಳ ಬಗ್ಗೆ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು. ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಸರ್ಕಾರಕ್ಕೆ ಪತ್ರ ಬರೆದು ನೆರವು ನೀಡಲು ಮನವಿ ಸಲ್ಲಿಸಿದ್ದಾರೆ. ಆದರೆ ಇದುವರೆಗೆ ಸರ್ಕಾರದಿಂದ ಯಾವುದೇ ಸಹಾಯ ಬಂದಿಲ್ಲ. ಸಂಘ-ಸಂಸ್ಥೆಗಳಿಂದಲೂ ಆರ್ಥಿಕ ನೆರವು ಸಿಕ್ಕಿಲ್ಲ. ಹೀಗಾಗಿ ಹರಿಹರಪ್ರಿಯ ಅವರು ಪ್ರಶಸ್ತಿಗೆ ಬೆಂಕಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

6 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಪುಸ್ತಕ ಮನೆಯಲ್ಲಿ ಸಂಗ್ರಹಿಸಿದ್ದು, ಮಳೆ ಬಂದರೆ ಒದ್ದೆಯಾಗಿ ಹಾಳಾಗುತ್ತಿವೆ ಎಂದು ಹರಿಹರಪ್ರಿಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read