ಹಾಸನ: ದನ ಮೇಯಿಸಲು ತೆರಳಿದ್ದಾಗ ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಹೋದರರು ಸಾವನ್ನಪ್ಪಿದ ಘಟನೆ ಹಾಸನ ತಾಲೂಕಿನ ದುದ್ದ ಸಮೀಪದ ಒಳಗೇರಹಳ್ಳಿ ಬಳಿ ನಡೆದಿದೆ.
ದರ್ಶನ್(15) ಹಾಗೂ ಲಕ್ಷ್ಮಿಕಾಂತ್(5) ಮೃತಪಟ್ಟ ಸಹೋದರರು. ಇವರು ಒಳಗೇರಹಳ್ಳಿಯ ಅರ್ಚಕ ರಾಮಚಂದ್ರ ಮತ್ತು ರತ್ನ ದಂಪತಿಯ ಪುತ್ರರಾಗಿದ್ದಾರೆ. ದನ ಮೇಯಿಸಲು ತೆರಳಿದ್ದ ಲಕ್ಷ್ಮಿಕಾಂತ್ ಮತ್ತು ದರ್ಶನ್ ಅವರು ವಾಪಸ್ ಬಂದಿರಲಿಲ್ಲ. ಕೆರೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಶೋಧ ನಡೆಸಿದಾಗ ಸಹೋದರರ ಶವ ಪತ್ತೆಯಾಗಿದೆ. ದುದ್ದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
