ಬೆಂಗಳೂರು : ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಎಲ್ಲಾ ಗಣ್ಯರಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ.
ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ 2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ನಾಡಿನ ಎಲ್ಲಾ ಗಣ್ಯ ಮಹನೀಯರಿಗೆ ಅಭಿನಂದನೆಗಳು. ಸಾಹಿತ್ಯ, ಸಂಗೀತ, ಜಾನಪದ, ವೈದ್ಯಕೀಯ, ಶಿಕ್ಷಣ, ಕ್ರೀಡೆ, ಮಾಧ್ಯಮ, ಸಮಾಜಸೇವೆ ಸೇರಿದಂತೆ ವಿವಿಧ ರಂಗಗಳಲ್ಲಿ ಈ ಎಲ್ಲರೂ ಸಲ್ಲಿಸಿದ ಅನನ್ಯ ಸೇವೆಯು ಇತರರಿಗೆ ಸ್ಪೂರ್ತಿಯಾಗಲಿ ಎಂದು ಹಾರೈಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
2019ರ ಡಾ. ರಾಜ್‌ಕುಮಾರ್ ಪ್ರಶಸ್ತಿ ವಿಜೇತರಾದ ಶ್ರೀಮತಿ ಉಮಾಶ್ರೀ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ವಿಜೇತರಾದ ಎನ್.ಆರ್.ನಂಜುಂಡೇಗೌಡ ಹಾಗೂ ಡಾ. ವಿಷ್ಣುವರ್ಧನ್ ಪ್ರಶಸ್ತಿ ವಿಜೇತ ರಿಚರ್ಡ್ ಕ್ಯಾಸ್ಟಿಲಿನೊ ಸೇರಿದಂತೆ ಇನ್ನಿತರೆ ಪ್ರಶಸ್ತಿಗಳಿಗೆ ಭಾಜನಾಗಿರುವ ಎಲ್ಲಾ ಗಣ್ಯರಿಗೆ ಅಭಿನಂದನೆಗಳು. ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಅನನ್ಯ ಸೇವೆಗಾಗಿ ದೊರೆತ ಈ ಪ್ರಶಸ್ತಿಗಳಿಗೆ ಪ್ರತಿಯೊಬ್ಬರೂ ಅತ್ಯಂತ ಅರ್ಹರು ಎಂದು ಭಾವಿಸಿದ್ದೇನೆ. ಕಲಾಸೇವೆಯ ಮೂಲಕ ನುಡಿಸೇವೆಗೈಯ್ಯುತ್ತಿರುವ ಈ ಎಲ್ಲಾ ಮಹನೀಯರ ಸಾಧನೆ ಯುವ ಕಲಾವಿದರಿಗೆ, ಸಮಾಜಕ್ಕೆ ಪ್ರೇರಣೆಯಾಗಲಿ ಎಂದಿದ್ದಾರೆ.
2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ನಾಡಿನ ಎಲ್ಲಾ ಗಣ್ಯ ಮಹನೀಯರಿಗೆ ಅಭಿನಂದನೆಗಳು.
— Siddaramaiah (@siddaramaiah) October 30, 2025
ಸಾಹಿತ್ಯ, ಸಂಗೀತ, ಜಾನಪದ, ವೈದ್ಯಕೀಯ, ಶಿಕ್ಷಣ, ಕ್ರೀಡೆ, ಮಾಧ್ಯಮ, ಸಮಾಜಸೇವೆ ಸೇರಿದಂತೆ ವಿವಿಧ ರಂಗಗಳಲ್ಲಿ ಈ ಎಲ್ಲರೂ ಸಲ್ಲಿಸಿದ ಅನನ್ಯ ಸೇವೆಯು ಇತರರಿಗೆ ಸ್ಪೂರ್ತಿಯಾಗಲಿ ಎಂದು ಹಾರೈಸುತ್ತೇನೆ. pic.twitter.com/yoM3YHF6rj
2019ರ ಡಾ. ರಾಜ್‌ಕುಮಾರ್ ಪ್ರಶಸ್ತಿ ವಿಜೇತರಾದ ಶ್ರೀಮತಿ ಉಮಾಶ್ರೀ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ವಿಜೇತರಾದ ಎನ್.ಆರ್.ನಂಜುಂಡೇಗೌಡ ಹಾಗೂ ಡಾ. ವಿಷ್ಣುವರ್ಧನ್ ಪ್ರಶಸ್ತಿ ವಿಜೇತ ರಿಚರ್ಡ್ ಕ್ಯಾಸ್ಟಿಲಿನೊ ಸೇರಿದಂತೆ ಇನ್ನಿತರೆ ಪ್ರಶಸ್ತಿಗಳಿಗೆ ಭಾಜನಾಗಿರುವ ಎಲ್ಲಾ ಗಣ್ಯರಿಗೆ ಅಭಿನಂದನೆಗಳು.
— Siddaramaiah (@siddaramaiah) October 30, 2025
ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಅನನ್ಯ… pic.twitter.com/h5yYM2G9tV
