ಮೈಸೂರು: ಜಮೀನು ವಿವಾದ ಹಿನ್ನೆಲೆ ಸೆಲ್ಫಿ ವಿಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕಿನ ತಲಕಾಡಿನಲ್ಲಿ ಘಟನೆ ನಡೆದಿದೆ.
ಜಮೀನಿನಲ್ಲಿ ನೇಣು ಬಿಗಿದುಕೊಂಡು 55 ವರ್ಷದ ಲಕ್ಷ್ಮಿಕಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆಸ್ತಿಯಲ್ಲಿ ಪಾಲು ಬೇಕೆಂದು ಸಹೋದರಿಯರು ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ.
ನನ್ನ ಸಾವಿಗೆ ಸಹೋದರಿಯರಾದ ದಾಕ್ಷಾಯಿಣಿ, ನಳಿನಿ, ಭಾವಂದಿರಾದ ದಾಸೇಗೌಡ, ನಾರಾಯಣಗೌಡ ಕಾರಣವೆಂದು ವಿಡಿಯೋ ಮಾಡಿದ್ದಾನೆ. ಈ ಹಿಂದೆ ಆಸ್ತಿಯಲ್ಲಿ ಪಾಲು ಪಡೆದು ಮತ್ತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾನೆ.
ಕಿರುಕುಳಕ್ಕೆ ಬೇಸತ್ತು ಲಕ್ಷ್ಮಿಕಾಂತ್ ಕುಟುಂಬ ಮೈಸೂರಿನಲ್ಲಿ ನೆಲೆಸಿದ್ದರು. ಕಿರುಕುಳದಿಂದ ಬೇಸತ್ತು ತಲಕಾಡಿನ ಜಮೀನಿನಲ್ಲಿ ಲಕ್ಷ್ಮಿಕಾಂತ್ ನೇಣಿಗೆ ಶರಣಾಗಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಘಟನೆ ಸಂಬಂಧ ತಲಕಾಡು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
