ಬೆಂಗಳೂರು : ರೋಡ್ ರೋಮಿಯೋಗಳ ಕಾಟಕ್ಕೆ ಅಪ್ರಾಪ್ತೆ ಹೆಣವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಲವ್ ಹೆಸರಿನಲ್ಲಿ ಅಪ್ರಾಪ್ತೆ ಹಿಂದೆ ಬಿದ್ದಿದ್ದ ಕಿರಾತಕ ಲೈಂಗಿಕವಾಗಿ ಬಳಸಿಕೊಳ್ಳಲು ಅಪ್ರಾಪ್ತ ಬಾಲಕಿಯನ್ನು ಬೈಕಿನಲ್ಲಿ ಕರೆದುಕೊಂಡು ಹೋಗುತ್ತಿದ್ದನು. ಬೈಕಿನಲ್ಲಿ ಕರೆದೊಯ್ಯುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು, ಅಪ್ರಾಪ್ತೆ ಮೃತಪಟ್ಟಿದ್ದಾಳೆ. ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಏನಿದು ಘಟನೆ..?
ಮನೋಜ್ ಎಂಬ ಯುವಕ 9 ನೇ ತರಗತಿ ಬಾಲಕಿ ಹಿಂದೆ ಬಿದ್ದಿದ್ದನು. ಪದೇ ಪದೇ ಕರೆಮಾಡಿ ಪ್ರೀತಿಸುವಂತೆ ಪೀಡಿಸುತ್ತಿದ್ದನು. ಅಕ್ಟೋಬರ್ 24 ರಂದು ಅಪ್ರಾಪ್ತೆಯನ್ನು ಮನೋಜ್ ಕರೆದುಕೊಂಡು ಹೋಗಿದ್ದಾನೆ. 2 ಬೈಕ್ ಗಳಲ್ಲಿ ಮನೋಜ್ & ಸ್ನೇಹಿತರು ಹೊಸಕೋಟೆ ಮಾರ್ಗವಾಗಿ ಪ್ರಯಾಣ ಬೆಳೆಸಿದ್ದಾರೆ.
ಬಾಲಕಿ & ಮನೋಜ್ ಒಂದು ಬೈಕ್ ನಲ್ಲಿದ್ದರೆ , ಮತ್ತೊಂದು ಬೈಕ್ ನಲ್ಲಿ ಮನೋಜ್ ನ ಇಬ್ಬರು ಸ್ನೇಹಿತರಿದ್ದರು. ಹೊಸಕೋಟೆ ಬಳಿ ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದಿದ್ದು, ಮನೋಜ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ನಂತರ ಹೊಸಕೋಟೆ ಪೊಲೀಸರು ಬಾಲಕಿ ಪೋಷಕರಿಗೆ ಕರೆ ಮಾಡಿ ಸುದ್ದಿ ತಿಳಿಸಿದ್ದಾರೆ.
ಆರೋಪಿಗಳು ಬಲವಂತವಾಗಿ ನನ್ನ ಮಗಳನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಲೈಂಗಿಕವಾಗಿ ಬಾಲಕಿಯನ್ನು ಬಳಸಿಕೊಳ್ಳಲು ಆರೋಪಿಗಳು ಯತ್ನಿಸಿದ್ದು, ಆದರೆ ಮಾರ್ಗಮಧ್ಯೆ ನಡೆದ ಅಪಘಾತದಲ್ಲಿ ಬಾಲಕಿ ಮೃತಪಟ್ಟಿದ್ದಾಳೆ. ಸದ್ಯ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೋಕ್ಸೋ ಕಾಯಿದೆ & ಕಿಡ್ನ್ಯಾಪ್ ಕೇಸ್ ನಡಿ ಓರ್ವ ಬಾಲಾಪರಾಧಿ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಮನೋಜ್, ಇರ್ಫಾನ್, ಮುಬಾರಕ್ ಸೇರಿ ನಾಲ್ವರನ್ನು ಬಂಧಿಸಿದ ಪೊಲೀಸರು ಜೈಲಿಗಟ್ಟಿದ್ದಾರೆ.
