ಬೆಂಗಳೂರು : ಚುನಾವಣಾ ಆಯುಕ್ತ ಓರ್ವ ರಾಜಕೀಯ ಫುಡಾರಿ ಎಂದು ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸಹಿ ಸಂಗ್ರಹ ಸಭೆಯಲ್ಲಿ ಮಾತನಾಡಿದ ಅವರು ”ರಾಹುಲ್ ಗಾಂಧಿ ಸಾಕ್ಷಿ ಸಮೇತ ದೂರು ಕೊಟ್ಟಿದ್ದಾರೆ. ಆದರೆ ದೂರು ಕೊಟ್ಟವರ ಮೇಲೆಯೇ ಆಯುಕ್ತರು ಮಾತನಾಡುತ್ತಿದ್ದಾರೆ. ಅವರ ತೇಜೋವಧೆ ಮಾಡುತ್ತಿದ್ದಾರೆ. ರಾಜಕೀಯ ಪುಢಾರಿ ರೀತಿ ಆಯುಕ್ತರು ಮಾತನಾಡುತ್ತಿದ್ದಾರೆ” ಎಂದು ಯತೀಂದ್ರ ಹೇಳಿದರು.
ಚುನಾವಣಾ ಅಕ್ರಮದ ಬಗ್ಗೆ ರಾಹುಲ್ ಗಾಂಧಿ ಬಹಳ ಕಷ್ಟಪಟ್ಟು ಸಾಕ್ಷಿಯನ್ನು ತಯಾರಿಸಿ ಕೊಟ್ಟರೂ ಕೂಡ ಕ್ರಮ ಕೈಗೊಂಡಿಲ್ಲ. ಚುನಾವಣಾ ಆಯೋಗ ಇದುವರೆಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತುತ್ತು, ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗುತ್ತಿರಲಿಲ್ಲ. ಆದರೆ ಈಗಿನ ರಾಜ್ಯ ಚುನಾವಣಾ ಆಯೋಗದ ಆಯುಕ್ತರು ರಾಜಕೀಯ ಫುಡಾರಿ ರೀತಿ ವರ್ತಿಸುತ್ತಿದ್ದಾರೆ. ರಾಹುಲ್ ಗಾಂಧಿ, ಖರ್ಗೆ ಅವರು ಚುನಾವಣಾ ಹಗರಣಗಳ ಬಗ್ಗೆ ಅಷ್ಟು ಸಾಕ್ಷಿ ಕೊಟ್ಟಿದ್ದರೂ ಅವರು ಗಣನೆಗೆ ತೆಗೆದುಕೊಂಡಿಲ್ಲ. ಆರೋಪ ಮಾಡಿದವರ ಮೇಲೆಯೇ ದಾಳಿ ನಡೆಸುತ್ತಿದ್ದಾರೆ ಎಂದರು.
