BIG NEWS : ‘ರಾಜ್ಯ ಸರ್ಕಾರಿ’ ನೌಕರರೇ ಗಮನಿಸಿ : ‘ಆರೋಗ್ಯ ಸಂಜೀವಿನಿ’ ಯೋಜನೆಗೆ ಜಸ್ಟ್ ಹೀಗೆ ಅರ್ಜಿ ಸಲ್ಲಿಸಿ.!

ಬೆಂಗಳೂರು :  ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ (KASS) ನೊಂದಾಯಿಸಿಕೊಳ್ಳಲು ತಮ್ಮ ಕುಟುಂಬದ ಎಲ್ಲಾ ಸದಸ್ಯರುಗಳ ಪಾಸ್ ಪೋರ್ಟ್ ಅಳತೆಯ ಪೋಟೋ ಗಳನ್ನು ಸ್ವಯಂ ದೃಡೀಕರಿಸಿ ನಿಗಧಿತ ನಮೂನೆಗಳನ್ನು ಭರ್ತಿ ಮಾಡಿ ಮೇಲಾಧಿಕಾರಿಗಳ ಮೂಲಕ ವೇತನ ಬಟವಾಡೆ ಅಧಿಕಾರಿಗಳಿಗೆ ಕೂಡಲೇ ಸಲ್ಲಿಸುವಂತೆ ಕೋರಿದೆ.

ಜ್ಯೋತಿ ಸಂಜೀವಿನಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರರಿಗೆ ಅರ್ಜಿ ತುಂಬಲು ವಿಶೇಷ ಸೂಚನೆಗಳು :

1. ಅನುಬಂಭ 1 ನ್ನು ಕಛೇರಿಗೆ 2 ಪ್ರತಿಗಳಲ್ಲಿ ಸಲ್ಲಿಸುವುದು.

2. ಅರ್ಜಿಯಲ್ಲಿನ ವಿವರಗಳನ್ನು ಕನ್ನಡ ಮತ್ತು ಆಂಗ್ಲ (CAPITAL LETTERS)ಭಾಷೆಯಲ್ಲಿ ತುಂಬುವುದು.

3.0 ನೌಕರರ ಮತ್ತು ಎಲ್ಲಾ ಅವಲಂಬಿತರ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ಲಗತ್ತಿಸುವುದು.

4. ಎಲ್ಲಾ ಅವಲಂಬಿತರ ಪ್ರತಿಯೊಬ್ಬರ ಭಾವಚಿತ್ರಗಳ ಹಿಂದೆ ಬಿಳಿಬಣ್ಣದ ಸೀನ್‌ನಲ್ಲಿರಬೇಕು ( Colour Photo With Wight BackGruond) ដោះ ជួយ

5. ನೌಕರರು ಅವಲಂಬಿತರ ಭಾವಚಿತ್ರದ ಮೇಲೆ ಸಹಿ ಮಾಡಿ ಮತ್ತು ದಿನಾಂಕವನ್ನು ನಮೂದಿಸಿ.

6.ಅನುಬಂಧ-1 ರಲ್ಲಿ ತೋರಿಸಿದ ಅವಲಂಬಿತರ ವಿವರಗಳನ್ನು FORM-C ನಲ್ಲಿಯೂ ತುಂಬಿ BEO ರವರ ಸಹಿಗಾಗಿ ಸಲ್ಲಿಸುವುದು.

7. ನೌಕರರ ಮತ್ತು ಅವಲಂಬಿತರ ಭಾವಚಿತ್ರಗಳು ಒಂದುಸಾರಿ ಅಪ್‌ ಲೋಡ್ ಆದಮೇಲೆ ಪುನಃ ಎಲ್ಲರ ಭಾವಚಿತ್ರಗಳನ್ನು 5ವರ್ಷಗಳ ನಂತರವೇ ಬದಲಾಯಿಸಲು ಅವಕಾಶವಿರುತ್ತದೆ.

8. ನೌಕರರಿಗೆ ಅನುಬಂಧ-1 ಸಲ್ಲಿಸಿದ ನಂತರದಲ್ಲಿ ಹೊಸಸೇರ್ಪಡೆ ಮತ್ತು ತೆಗೆದು ಹಾಕುವಿಕೆಗೆ ಅವಕಾಶವಿದೆ.(ವಿವಾಹ, ಮಗುಜನನ, ಮರಣ ಇತ್ಯಾದಿ)ಇದಕ್ಕಾಗಿ FORM-A4 ಇರುತ್ತದೆ..

9. ಎಲ್ಲಾ ಅವಲಂಬಿತರ ಹೆಸರುಗಳನ್ನು ಆಧಾರ್‌ ಕಾರ್ಡ್‌ನಲ್ಲಿರುವಂತೆಯೇ ತುಂಬಬೇಕು. ವ್ಯತ್ಯಾಸವಾದಲ್ಲಿ ಇಂದೀಕರಿಸಲು ಬರುವುದಿಲ್ಲ.

10.ನೌಕರ ಮತ್ತು ಎಲ್ಲಾ ಅವಲಂಬಿತರ ಭಾವಚಿತ್ರಗಳನ್ನು 5ವರ್ಷಗಳಿಗೊಮ್ಮೆ ಕಡ್ಡಾಯವಾಗಿ ಬದಲಾಯಿಸಬೇಕು.

11.ಪುರುಷ ನೌಕರರಿಗೆ : ಹೆಂಡತಿ, ಮಕ್ಕಳು, ಮತ್ತು ತಂದೆತಾಯಿಗಳು ಹಾಗೂ ಮಲತಾಯಿ ಮಾತ್ರ ಅವಲಂಬಿತರಾಗಿರುತ್ತಾರೆ.( ಹೆಂಡತಿಯ ತಂದೆ,ತಾಯಿಗಳು ಬರುವುದಿಲ್ಲ)

12.ಮಹಿಳಾ ನೌಕರರಿಗೆ : ಗಂಡ,ಮಕ್ಕಳು ಮತ್ತು ತಮ್ಮಗಳ ತಂದೆ,ತಾಯಿಗಳು ಹಾಗೂ ಮಲತಾಯಿ ಮಾತ್ರ (ಗಂಡನ ತಂದೆ,ತಾಯಿ ಅಂದರೆ ಅತ್ತೆ,ಮಾವ ಬರುವುದಿಲ್ಲ.)

13. ಸರ್ಕಾರಿ ವಿವಾಹಿತ ನೌಕರರು ಎರಡು ಮದುವೆಯಾಗಿದ್ದರೆ ಮೊದಲನೇ ಹೆಂಡತಿ ಮತ್ತು ಮಕ್ಕಳು ಮಾತ್ರ ಈ ಯೋಜನೆ ಅನ್ವಯ ಎರಡನೇ ಹೆಂಡತಿ ಮತ್ತು ಮಕ್ಕಳಿಗೆ ಈ ಯೋಜನೆಗೆ ಅವಕಾಸವಿರುವುದಿಲ್ಲ.

ವಿಶೇಷ ಸೂಚನೆ : ಸರ್ಕಾರಿ ನೌಕರರು ಚಿಕಿತ್ಸೆ ಪಡೆಯಲು ಯೋಜನೆಗೆ ಒಳಪಟ್ಟ ಆಸ್ಪತ್ರೆಗೆ ಹೋದಾಗ ಜ್ಯೋತಿ ಸಂಜೀವಿನಿ ಯೋಜನೆಯಲ್ಲಿ ನಮೂದಾಗಿರುವ ಎಲ್ಲಾ ಅವಲಂಬಿತರ ಹೆಸರು ಮತ್ತು ಭಾವಚಿತ್ರಗಳು ಗೋಚರಿಸುತ್ತವೆ. ಈ ಯೋಜನೆಗೆ ಒಳಪಡದಿದ್ದರೆ ಬರೀ ನೌಕರರ ಹೆಸರು ಮಾತ್ರ ಆಸ್ಪತ್ರೆಯ ವೆಬ್‌ಸೈಟ್‌ನಲ್ಲಿ ಗೋಚರಿಸುವುದರಿಂದ ಅವಲಂಬಿತರಿಗೆ ಚಿಕಿತ್ಸೆ ಕೊಡಿಸಲು ತೊಂದರೆಯಾಗುತ್ತದೆ.

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ (KASS) ನೊಂದಾಯಿಸಿಕೊಳ್ಳಲು ತಮ್ಮ ಕುಟುಂಬದ ಎಲ್ಲಾ ಸದಸ್ಯರುಗಳ ಪಾಸ್ ಪೋರ್ಟ್ ಅಳತೆಯ ಪೋಟೋ ಗಳನ್ನು ಸ್ವಯಂ ದೃಡೀಕರಿಸಿ ನಿಗಧಿತ ನಮೂನೆಗಳನ್ನು ಭರ್ತಿ ಮಾಡಿ ಮೇಲಾಧಿಕಾರಿಗಳ ಮೂಲಕ ವೇತನ ಬಟವಾಡೆ ಅಧಿಕಾರಿಗಳಿಗೆ ಕೂಡಲೇ ಸಲ್ಲಿಸುವಂತೆ ಕೋರಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read