ಬೆಂಗಳೂರು: ತನ್ನ ತಾಯಿಯನ್ನು ಬೈದಿದಕ್ಕೆ ವ್ಯಕ್ತಿಯೊಬ್ಬನನ್ನು ಮಗ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಂಗಳೂರಿನ ಜ್ಞಾನಭಾರತಿ ಠಾಣೆ ವ್ಯಾಪ್ತಿಯ ಉಳ್ಳಾಲ ಉಪನಗರದಲ್ಲಿ ನಡೆದಿದೆ.
ಅವಿನಾಶ್ (36) ಕೊಲೆಯಾದ ವ್ಯಕ್ತಿ. ಕಾರ್ತಿಕ್ ಕೊಲೆಗೈದಿರುವ ಆರೋಪಿ. ಉಳ್ಳಾಲದ ರಾಮಚಂದ್ರಪ್ಪ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. ಆಟೋ ಚಾಲಕನಾಗಿದ್ದ ಅವಿನಾಶ್ ಕುಡಿದು ಬಂದು ಕಾರ್ತಿಕ್ ತಾಯಿ ಜೊತೆ ಗಲಾಟೆ ಮಾಡುತ್ತಿದ್ದ. ಅವಾಚ್ಯವಾಗಿ ನಿಂದಿಸುತ್ತಿದ್ದ. ಇದರಿಂದ ನೊಂದ ತಾಯಿ ಮಗ ಕಾರ್ತಿಕ್ ಗೆ ಕರೆ ಮಾಡಿ ತಿಳಿಸಿದ್ದರು. ಮನೆಗೆ ಬಂದ ಮಗ ಕಬ್ಬಿಣದ ರಾಡ್ ನಿಂದ ಅವಿನಾಶ್ ಮೇಲೆ ಹಲ್ಲೆ ನಡೆಸಿದ್ದಾನೆ. ಮಾರಣಾಂತಿಕವಾಗಿ ಹಲ್ಲೆಗೊಳಗಾದ ಅವಿನಾಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಹತ್ಯೆ ಬಳಿಕ ಕಾರ್ತಿಕ್ ತಾನೇ ಪೊಲೀಸರುಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಬಳಿಕ ಪೊಲೀಸರಿಗೆ ಶರಣಾಗತನಾಗಿದ್ದಾನೆ.
