ಬೆಳಗಾವಿ: ಪ್ರೇಯಸಿಯೊಂದಿಗೆ ಪತಿರಾಯ ಲಾಡ್ಜ್ ನಲ್ಲಿ ಸಿಕ್ಕಿಬಿದ್ದ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದಲ್ಲಿ ಘಟನೆ ನಡೆದಿದೆ.
ಲಾಡ್ಜ್ ರೂಂನಿಂದ ಪತಿಯನ್ನು ಹೊರಗೆ ಎಳೆದುಕೊಂಡು ಬಂದ ಪತ್ನಿ ಚಪ್ಪಲಿಯಿಂದದ ಹೊಡೆದಿದ್ದಾರೆ. ಸಾರ್ವಜನಿಕವಾಗಿ ಗಂಡನಿಗೆ ಪತ್ನಿ ಧರ್ಮದೇಟು ನೀಡಿದ್ದಾರೆ. ಪತಿ ಅವಿನಾಶ್ ಭೋಸಲೆಗೆ ಪತ್ನಿ ಮತ್ತು ಮಾವ ಥಳಿಸಿದ್ದಾರೆ. ಚಿಕ್ಕೋಡಿ ಬಸ್ ನಿಲ್ದಾಣದ ಬಳಿ ಲಾಡ್ಜ್ ಎದುರು ಘಟನೆ ನಡೆದಿದೆ. ಪತಿಯನ್ನು ರಸ್ತೆಯಲ್ಲಿ ಉಳ್ಳಾಡಿಸಿ ಪತ್ನಿ ಚಪ್ಪಲಿಯಿಂದ ಹೊಡೆದಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
