ದುನಿಯಾ ಡಿಜಿಟಲ್ ಡೆಸ್ಕ್ : ಬೆಳಗ್ಗೆ ಬೇಗ ಏಳದ ಹೆಣ್ಣುಮಕ್ಕಳನ್ನು ಎಬ್ಬಿಸಲು ತಾಯಿ ಬ್ಯಾಂಡ್’ಸೆಟ್ ಕರೆಸಿದ್ದು, ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ತಾಯಿಯೊಬ್ಬರು ತಮ್ಮ ಹೆಣ್ಣುಮಕ್ಕಳನ್ನು ನಿದ್ರೆಯಿಂದ ಎಬ್ಬಿಸಲು ಬ್ಯಾಂಡ್ ಸೆಟ್ ನ್ನು ಮನೆಗೆ ಕರೆಸಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಹಾಸಿಗೆಯಿಂದ ಎದ್ದಿರಲ್ಲ, ಅವರನ್ನು ಎಬ್ಬಿಸಲು ಬ್ಯಾಂಡ್ ಸೆಟ್ ತಂಡವನ್ನೇ ಮನೆಗೆ ಕರೆಸಿದ್ದಾರೆ. ಜೋರಾಗಿ ವಾದ್ಯ ಊದಿ ಬ್ಯಾಂಡ್ ಬಾರಿಸಿ ಮಕ್ಕಳನ್ನು ಎಬ್ಬಿಸಿದ್ದಾರೆ .
ಮುಂಜಾನೆಯ ಆರ್ಕೆಸ್ಟ್ರಾವನ್ನು ನಿರೀಕ್ಷಿಸದ ಹೆಣ್ಣುಮಕ್ಕಳು ಆಶ್ಚರ್ಯಚಕಿತರಾಗಿ ಮತ್ತೆ ಬೆಡ್ ಶೀಟ್ ಹೊದ್ದಿಕೊಂಡು ಮಲಗುವುದನ್ನು ನೀವು ನೋಡಬಹುದು.ಈ ವಿಡಿಯೋವನ್ನು ಎಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ಭಾರತದ ಪೋಷಕರು ಯಾವ ಪ್ರತಿಭೆಗೂ ಕಮ್ಮಿ ಇಲ್ಲ ಎಂಬುದನ್ನು ಈ ಕ್ಲಿಪ್ ಸಂಪೂರ್ಣವಾಗಿ ಸೆರೆಹಿಡಿಯುತ್ತದೆ.
