SHOCKING: ಎಣ್ಣೆ ಜೊತೆ ಮಿಕ್ಸ್ಚರ್ ಕೊಟ್ಟಿಲ್ಲ ಎಂದು ಬಾರ್ ಕ್ಯಾಷಿಯರ್ ನನ್ನೇ ಹತ್ಯೆಗೈದ ದುಷ್ಕರ್ಮಿ

ಕೋಲಾರ: ಎಣ್ಣೆ ಜೊತೆ ಮಿಕ್ಸ್ಚರ್ ಕೊಟ್ಟಿಲ್ಲ ಎಂದು ದುಷ್ಕರ್ಮಿಯೊಬ್ಬ ಬಾರ್ ಕ್ಯಾಷಿಯರ್ ನನ್ನೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರದ ಮಾಲೂರು ತಾಲೂಕಿನ ಲಕ್ಕೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಾಸನ ಮೂಲದ ಕುಮಾರ್ (45) ಮೃತ ಕ್ಯಾಷಿಯರ್. ಸುಭಾಷ ಆರೋಪಿ. ಕೊಲೆಯಾದ ಕುಮಾರ್ ಲಕ್ಕೂರು ಗ್ರಾಮದ ವೈನ್ ಶಾಪ್ ನಲ್ಲಿ ಕೆಲಸಮಾಡುತ್ತಿದ್ದ. ಅಲ್ಲಿಗೆ ಬಂದಿದ್ದ ಆರೋಪಿ ಕುಡಿಯುವ ವೇಳೆ ತನಗೆ ಮಿಕ್ಸ್ಚರ್ ಕೇಳಿದ್ದಾನೆ. ಈ ವೇಳೆ ಗಲಾಟೆ ನಡೆದಿದೆ.

ಬಳಿಕ ಕ್ಯಾಷಿಯರ್ ಬಾರ್ ಬಂದ್ ಮಾಡಿ ಮನೆಯತ್ತ ತೆರಳಿದ್ದಾನೆ. ಹಿಂಬಾಲಿಸಿಕೊಂಡು ಬಂದ ಆರೋಪಿ ಕ್ಯಾಷಿಯರ್ ನ ಹೆಂಡತಿ ಮಕ್ಕಳ ಎದುರಲ್ಲೇ ಚಾಕುವಿನಿಂದ ಇರಿದು ಕೊಂದಿದ್ದಾನೆ. ಮಾಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read