HomeLatest Newsಕರ್ನಾಟಕ ಸರ್ಕಾರದಿಂದ ಐತಿಹಾಸಿಕ ನಿರ್ಣಯ: ಬೆಂಗಳೂರು ನಾಗರಿಕರಿಗೆ ಅತೀ ದೊಡ್ಡ ಉಡುಗೊರೆ: 2 ಸಾವಿರ ಚ.ಮೀ....

ಕರ್ನಾಟಕ ಸರ್ಕಾರದಿಂದ ಐತಿಹಾಸಿಕ ನಿರ್ಣಯ: ಬೆಂಗಳೂರು ನಾಗರಿಕರಿಗೆ ಅತೀ ದೊಡ್ಡ ಉಡುಗೊರೆ: 2 ಸಾವಿರ ಚ.ಮೀ. ಮೇಲ್ಪಟ್ಟ ನಿವೇಶನಗಳಿಗೂ ಎ ಖಾತಾ

ಬೆಂಗಳೂರು: ಕರ್ನಾಟಕ ಸರ್ಕಾರದಿಂದ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದ್ದು, ಬೆಂಗಳೂರು ನಾಗರಿಕರಿಗೆ ಅತೀ ದೊಡ್ಡ ಉಡುಗೊರೆ ನೀಡಲಾಗಿದೆ.

ಬಿ-ಖಾತಾದಿಂದ ಎ-ಖಾತಾ ಪರಿವರ್ತನೆ ಮತ್ತು ಹೊಸ ನಿವೇಶನಗಳಿಗೂ ಎ-ಖಾತಾ ಲಭ್ಯ

ಬಿ-ಖಾತಾದಿಂದ ಎ-ಖಾತಾ ಸಹಾಯವಾಣಿ: 94806 83695

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2000 ಚ.ಮೀ.ಗಳ ವರೆಗೆ

* ನಿಮ್ಮ ಮೊಬೈಲ್ ಮತ್ತು ಓಟಿಪಿ ಬಳಸಿ https://bbmp.karnataka.gov.in/BloAKhata ರಲ್ಲಿ ಲಾಗಿನ್ ಆಗಿ

* ನಿಮ್ಮ ಅಂತಿಮ ಬಿ-ಖಾತೆಯ ಇಪಿಐಡಿ ಸಂಖ್ಯೆಯನ್ನು ನಮೂದಿಸಿ ವಿವರಗಳನ್ನು ಪಡೆಯಿರಿ

* ಮಾಲೀಕರ ಆಧಾರ್ ದೃಢೀಕರಿಸಿ

* ನಿವೇಶನವಿರುವ ಸ್ಥಳವನ್ನು ಮತ್ತು ನಿವೇಶನ ಮುಂಭಾಗದ ರಸ್ತೆಯ ಪ್ರಕಾರವನ್ನು ದೃಢಪಡಿಸಿ

* ಭೂ ಪರಿವರ್ತನೆಯಾದ ಮತ್ತು ಭೂ ಪರಿವರ್ತನೆಯಾಗದ ಎರಡೂ ನಿವೇಶನಗಳು ಅರ್ಹ (ಫ್ಲಾಟ್ ಗಳಿಗೆ ಅರ್ಹತೆಯಿಲ್ಲ)

* ನಿಗದಿತ ಅರ್ಜಿ ಶುಲ್ಕ ರೂ.500/-ಗಳನ್ನು ಪಾವತಿಸಿ ಸ್ವೀಕೃತಿಯನ್ನು ಪಡೆಯಿರಿ

* ನಗರ ಪಾಲಿಕೆ ವತಿಯಿಂದ ನಿವೇಶನಕ್ಕೆ ಭೇಟಿ ಮತ್ತು ದೃಢೀಕರಣ

* ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರದ ಶೇ. 5% ರಷ್ಟು ಮೊತ್ತವನ್ನು “ಏಕ ನಿವೇಶನ” ಅನುಮೋದನೆ ಶುಲ್ಕವಾಗಿ ಹಾಗೂ ಇತರೆ ಶುಲ್ಕಗಳನ್ನು ಪಾವತಿಸುವುದು

* ಸ್ವಯಂಕೃತ “ಏಕ ನಿವೇಶನ” ಅನುಮೋದನೆಯಾಗಿ ಅರ್ಹತಾನುಸಾರ ಎ-ಖಾತಾ ವಿತರಣೆ

2000 ಚ.ಮೀ.ಗೂ ಹೆಚ್ಚಿನ

+ ನೋಂದಾಯಿತ ವಾಸ್ತುಶಿಲ್ಪಿ ಅಥವಾ ಎಂಜಿನಿಯರ್‌ರನ್ನು ಸಂಪರ್ಕಿಸಿ

* ಯಾವುದೇ ರೀತಿಯ ನಿವೇಶನಗಳಿಗಾಗಿ https://bpas.bbmpgov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

* ಅಗತ್ಯ ದಾಖಲೆಗಳು ಮತ್ತು ಕ್ಯಾಡ್ ಡ್ರಾಯಿಂಗ್ ಅನ್ನು ಆಪ್ ಲೋಡ್ ಮಾಡಿ

* ಆರಂಭಿಕ ಪರಿಶೀಲನಾ ಶುಲ್ಕ ರೂ.500 ಅನ್ನು ಪಾವತಿಸಿ

* ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ (ಫ್ಲಾಟ್ ಗಳಿಗೆ ಅರ್ಹತೆಯಿಲ್ಲ)

* ನಿವೇಶನಕ್ಕೆ ಭೇಟಿ ನೀಡುವ ಮೂಲಕ ಪರಿಶೀಲನೆ

* ಅರ್ಹತಾನುಸಾರ ಅನುಮೋದನೆ

* ಅನ್ವಯವಾಗುವ ಶುಲ್ಕಗಳ ಪಾವತಿ

* ಅರ್ಹತಾನುಸಾರ “ಏಕನಿವೇಶನ” ಅನುಮೋದನೆ ಪ್ರಮಾಣಪತ್ರ, ಡ್ರಾಯಿಂಗ್ ಮತ್ತು ಎ-ಖಾತಾ ವಿತರಣೆ

ನೋಂದಣಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular