ಬೆಂಗಳೂರು: ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ನಡುವಿನ ವಾಕ್ಸಮರ ಮುಂದುವರೆದಿದೆ. ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ನನ್ನ ತಾಯಿಯನ್ನು ಅವಮಾನಿಸಿದ್ದಾರೆ. ಅವರು ಕ್ಷಮೆ ಕೇಳಲಿ ಎಂದು ಪ್ರದೀಪ್ ಈಶ್ವರ್ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಪ್ರದೀಪ್ ಈಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ್ದ ಪ್ರತಾಪ್ ಸಿಂಹ ಮುಳ್ಳಂದಿ ಎಂದು ಜರಿದಿದ್ದರು. ಅಲ್ಲದೇ ಕೆಲ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿ ನಾಲಿಗೆ ಹರಿಬಿಟ್ಟಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರದೀಪ್ ಈಶ್ವರ್, ಪ್ರತಾಪ್ ಸಿಂಹಗೆ ನಾನು ಮುಳ್ಳಂದಿ ಮುಖದವನಲ್ಲ. ನಿನ್ನ ಮುಖ ಮೊದಲು ನೋಡಿಕೋ ನೀನು ಮುಳ್ಳಂದಿ. ನಿನ್ನ ಹೇರ್ ಸ್ಟೈಲ್ ನೋಡು ಮುಳ್ಳಂದಿ ಮುಳ್ಳಿನಂತೆ ಇದೆ ಎಂದು ವ್ಯಂಗ್ಯವಾಡಿದ್ದರು. ಇದೇ ವಿಚಾರವಾಗಿ ಮತ್ತೆ ವಾಗ್ದಾಳಿ ಮುಂದುವರೆಸಿರುವ ಪ್ರದೀಪ್ ಈಶ್ವರ್, ಪ್ರತಾಪ್ ಸಿಂಹ ನನ್ನ ತಾಯಿಯನ್ನು ಅವಮಾನಿಸಿದ್ದಾರೆ ಮೊದಲು ಕ್ಷಮೆ ಕೇಳಲಿ ಎಂದಿದ್ದಾರೆ.
ನನ್ನ ತಾಯಿ ಇಲ್ಲಿಲ್ಲ, ಸ್ವರ್ಗದಲ್ಲಿದ್ದಾರೆ. ನೀನು ಅಲ್ಲಿಗೆ ಹೋಗಿ ಕ್ಷೆಮೆ ಕೇಳುವುದು ಬೇಡ. ಚಾಮುಂಡಿ ತಾಯಿ ಮುಂದೆ ಕ್ಷಮೆ ಕೇಳು ಸಾಕು ಎಂದು ಹೇಳಿದ್ದಾರೆ.
